ಅಮ್ಮಣಗಿ ಗ್ರಾಮದಲ್ಲಿ ಪ್ರಧಾನಮಂತ್ರಿ ಜನೌಷಧ ಕೇಂದ್ರವನ್ನು ರಮೇಶ ಕತ್ತಿ ಉದ್ಘಾಟಿಸಿದರು. ಸುರೇಶ ಕುಲಕರ್ಣಿ, ಬಸವಣ್ಣಿ ನಾಗನೂರಿ, ಪ್ರಶಾಂತ ಪಾಟೀಲ ಇತರರಿದ್ದರು.
ಸಂಕೇಶ್ವರ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಕೇವಲ ಕೃಷಿ ಸಾಲ ನೀಡುವ ಸಂಸ್ಥೆಗಳಾಗಿ ಉಳಿಯದೇ, ಗ್ರಾಮೀಣ ಜನರ ಅಗತ್ಯಗಳಿಗೆ ಸ್ಪಂದಿಸುವ ಮೂಲಕ, ಸಹಕಾರ ಕ್ಷೇತ್ರದ ಜನಪರ ಕಾಳಜಿಯ ಹೊಣೆಗಾರಿಕೆ ಮೆರೆಯುತ್ತಿರುವುದು ಶ್ಲಾಘನೀಯ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.
ಸಮೀಪದ ಅಮ್ಮಣಗಿ ಗ್ರಾಮದಲ್ಲಿ ಶುಕ್ರವಾರ ಶ್ರೀ ಮಲ್ಲಿಕಾರ್ಜುನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಆರಂಭಿಸಿರುವ ಪ್ರಧಾನಮಂತ್ರಿ ಜನೌಷಧ ಕೇಂದ್ರ ಉದ್ಘಾಟಿಸಿ ಮಾತನಾಡಿ, ರೈತರಿಗೆ ಸಾಲಸೌಲಭ್ಯ, ಗುಣಮಟ್ಟದ ಬೀಜ, ರಸಗೊಬ್ಬರ ಸೇರಿ ಅಗತ್ಯ ಕೃಷಿ ಸೇವೆ ಒದಗಿಸುತ್ತಿದ್ದ ಸಂಘ, ಇದೀಗ ಆರೋಗ್ಯ ಕ್ಷೇತ್ರದಲ್ಲಿಯೂ ಸೇವೆ ಒದಗಿಸುವ ನಿಟ್ಟಿನಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಔಷಧ ದೊರೆಯುವಂತೆ ಮಾಡಿದೆ ಎಂದರು.
ಸಂಘದ ಅಧ್ಯಕ್ಷ ಸುರೇಶ ಕುಲಕರ್ಣಿ, ಉಪಾಧ್ಯಕ್ಷ ಬಸವಣ್ಣಿ ನಾಗನೂರಿ, ನಿರ್ದೇಶಕ ಪ್ರಶಾಂತ ಪಾಟೀಲ, ಸುಭಾಷ ಮಸರಗುಪ್ಪಿ, ಅದಮ್ಮ ಜಕಾತಿ, ಬಸಪ್ಪ ಹೆಗಡೆ, ಅಣ್ಣಾಸಾಹೇಬ ದೇಸಾಯಿ, ಸುರೇಶ ನಡುಗೇರಿ, ಆಶಾ ಜಾಧವ, ಶೋಭಾ ವಾಲಿ, ಸೋಫಿಯಾಬೇಗಂ ಜಕಾತಿ, ಮುಖ್ಯ ಕಾರ್ಯನಿರ್ವಹಣಾಽಕಾರಿ ತಮ್ಮಣ್ಣ ನಾಗನೂರಿ ಇತರರಿದ್ದರು.
ಜನರ ಭಾವನೆಗಳಿಗೆ ಸ್ಪಂದಿಸದೆ ಬೆಳಗಾವಿ ಅಽವೇಶನ ಟೂರಿಂಗ್ ಟಾಕೀಸ್‌ನಂತಾಗಿದೆ ಎಂದು ಮಾಜಿ ಸಂಸದ ರಮೇಶ ಕತ್ತಿ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಸಚಿವರು, ಹಿರಿಯ ಅಧಿಕಾರಿಗಳು ಪ್ರಾಮಾಣಿಕ ಕೆಲಸ ಮಾಡಿದರೆ ಜನರ ಬದುಕಿನಲ್ಲಿ ಬದಲಾವಣೆ ತರಬಹುದು. ಮುಂಬರುವ ಅಧಿವೇಶನವಾದರೂ ಮಾದರಿಯಾಗಿ ನಡೆಯಬೇಕು. ಬೆಳಗಾವಿ ಜಿಲ್ಲೆ ವಿಭಜನೆ ಮಾಡಿ ಜನರ ಬಹುವರ್ಷಗಳ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು. ಯುವ ಧುರೀಣ ವಿನಯ ಪಾಟೀಲ, ಬಸವಣ್ಣಿ ನಾಗನೂರಿ, ಪ್ರಶಾಂತ ಪಾಟೀಲ ಇತರರಿದ್ದರು.