ಶಿವಬಸವ ನಗರದಲ್ಲಿರುವ ನಾಗನೂರು ರುದ್ರಾಕ್ಷಿಮಠದ ಡಾ.ಶಿವಬಸವ ಸ್ವಾಮೀಜಿ ಜಯಂತಿ ಮಹೋತ್ಸವದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೌರವಿಸಲಾ ಯಿತು. ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ, ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಇತರರಿದ್ದರು. 
ಬೆಳಗಾವಿ

ಮಠಗಳ ಕಾರ್ಯ ಸರ್ಕಾರಕ್ಕೆ ಸ್ಫೂರ್ತಿ

ಬೆಳಗಾವಿ: ಶ್ರೀಮಠಗಳು ಸರ್ಕಾರಕ್ಕೆ ಸಮನಾಗಿ ಸಾಮಾಜಿಕ ಕೆಲಸ ಮಾಡುತ್ತಿವೆ. ಮಠಗಳ ಕೆಲಸವೇ ಸರ್ಕಾರಕ್ಕೆ ಸ್ಫೂರ್ತಿಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ನಗರದ ನಾಗನೂರು ರುದ್ರಾಕ್ಷಿಮಠದ ಡಾ.ಶಿವಬಸವ ಮಹಾಸ್ವಾಮಿಗಳ 136ನೇ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಟಿಯು ಕುಲಸಚಿವ ಡಾ.ಪ್ರಸಾದ ರಾಂಪುರೆ ಮಾತನಾಡಿ, ಬೆಳಗಾವಿ ಕರ್ನಾಟಕದಲ್ಲಿ ಇರಲು ಕೆಎಲ್ಇ ಸೊಸೈಟಿ ಹಾಗೂ ಶಿವಬಸವ ಶ್ರೀಗಳ ಹೋರಾಟ ಸ್ಮರಿಸಬೇಕು ಎಂದರು.
ವಾಯು ಪಡೆ ನಿವೃತ್ತ ಅಧಿಕಾರಿ ಬಸವಲಿಂಗಪ್ಪ ವಣ್ಣೂರು, ಬಾಳಪ್ಪ ದೊಡ್ಡಬಂಗಿ, ಗುತ್ತಿಗೆದಾರ ಚನ್ನಪ್ಪ ನರಸನವರ, ಕಾವೇರಿ ಕಿಲಾರಿ ಅವರಿಗೆ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗದಗ ತೋಂಟದಾರ್ಯ ಸಂಸ್ಥಾನ ಮಠದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ, ಧಾರವಾಡದ ಮುರುಘಾಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ, ಬೆಟ್ಟದಪುರದ ಸಲೀಲಾಖ್ಯ ವಿರಕ್ತಮಠದ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ಅಲ್ಲಮಪ್ರಭು ಸ್ವಾಮೀಜಿ, ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ, ಡಾ.ಬಸನಗೌಡ ಪಾಟೀಲ ಇತರರಿದ್ದರು.