ಹುಣಸಿಕೊಳ್ಳ ಮಠದಲ್ಲಿ ಸಿದ್ಧಬಸವ ದೇವರು ಮಾತನಾಡಿದರು. ಆನಂದ ಮಹಾರಾಜ ಗೋಸಾವಿ, ಬಸವಾನಂದ ಸ್ವಾಮೀಜಿ ಇತರರಿದ್ದರು. 
ಬೆಳಗಾವಿ

ಸಿದ್ಧಬಸವ ದೇವರ ಕಾರ್ಯ ಶ್ಲಾಘನೀಯ

ಯಮಕನಮರಡಿ: ಸಿದ್ಧಬಸವ ದೇವರ ಕಾರ್ಯ ಶ್ಲಾಘನೀಯ. 12ನೇ ಶತಮಾನದಲ್ಲಿ ಬಸವಣ್ಣನವರು, ಅಲ್ಲಮಪ್ರಭು ನಡೆಸಿದ ಕ್ರಾಂತಿಯ ಘಟನೆಯನ್ನು ಮುಮ್ಮಿಗಟ್ಟಿ ಬಸವಾನಂದ ಸ್ವಾಮೀಜಿ ಸ್ಮರಿಸಿದರು.
ಸ್ಥಳೀಯ ಶ್ರೀ ಜಗದ್ಗುರು ಶೂನ್ಯ ಸಂಪಾದನಾ ಪೀಠ ಹುಣಸಿಕೊಳ್ಳ ಮಠದಲ್ಲಿ ಈಚೆಗೆ ಚಂದ್ರಮಾನ ಸಮಯಾನುಸಾರ ವಚನ ಆದಿಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಕಲ್ಲು ದೇವರಲ್ಲ, ಮಣ್ಣು ದೇವರಲ್ಲ, ಅಧಿಕಾರ ಶಾಶ್ವತವಲ್ಲ, ಭಕ್ತಿ ದೊಡ್ಡದು ಎಂದರು. ಹುಣಸಿಕೊಳ್ಳಮಠದ ಉತ್ತರಾಧಿಕಾರಿ ಸಿದ್ಧಬಸವ ದೇವರು ಪ್ರಸ್ತಾವಿಕವಾಗಿ ಮಾತನಾಡಿದರು.
ಶಿಕ್ಷಕ ವಿ.ಜಿ.ಪಾಟೀಲ ಮಾತನಾಡಿ, ನಗು ಮನುಷ್ಯನ ಅವಿಭಾಜ್ಯ ಅಂಗವಾಗಿದ್ದು, ಇದೊಂದು ಯೋಗ. ನಗುವುದರಿಂದ ಮನುಷ್ಯನ ಆಯುಷ್ಯ ಹೆಚ್ಚಾಗುತ್ತದೆ. ರಕ್ತದೊತ್ತಡ, ಸಕ್ಕರೆ ಕಾಯಿಲೆಗಳಂತಹ ರೋಗ ದೂರವಾಗುತ್ತವೆ ಎಂದು ಹೇಳಿದರು.
ಹರಿ ಮಂದಿರದ ಆನಂದ ಮಹಾರಾಜ ಗೋಸಾವಿ ಮಾತನಾಡಿ, ಅಧಿಕ ಮಾಸದ ಬಗ್ಗೆ 365 ದಿನದ ಸೂರ್ಯಮಾನ ಹಾಗೂ 354 ಚಂದ್ರಮಾನದ ನಡುವಿನ ವ್ಯತ್ಯಾಸಗಳ ಮಾಹಿತಿ ನೀಡಿದರು. ಕಾಂಗ್ರೆಸ್ ಯುವಧುರೀಣ ಕಿರಣ ರಜಪೂತ, ಮಠದ ಟ್ರಸ್ಟ್ ಸದಸ್ಯ ಗಿರೀಶ ಮಿಶ್ರಿಕೋಟಿ ಇತರರಿದ್ದರು. ಕಾರ್ಯಕ್ರಮ ಮುಗಿದ ನಂತರ ಮಹಾಪ್ರಸಾದವನ್ನು ಏರ್ಪಡಿಸಲಾಗಿತ್ತು.