ಕಕಮರಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸರ್ವಧರ್ಮ ಸಭೆಯಲ್ಲಿ ಅಣ್ಣಪ್ಪ ಮಹಾರಾಜರು ಮಾತನಾಡಿದರು. ಅಶೋಕ ಮಹಾರಾಜರು, ಗುರುಲಿಂಗಜಂಗಮ ಸ್ವಾಮೀಜಿ, ಮಲ್ಲಿಕಾರ್ಜುನ ಮಹಾರಾಜರು ಇತರರಿದ್ದರು. 
ಬೆಳಗಾವಿ

ಗುರುಲಿಂಗ ಜಂಗಮ ಶ್ರೀ ಕಾರ್ಯ ಶ್ಲಾಘನೀಯ

ವಿದ್ಯಾ ಶೆಟ್ಟನಗೌಡ್ರ
ಕಕಮರಿ: ಸದ್ಗುರು ರಾಯಲಿಂಗೇಶ್ವರ ಮಠ ಅಧ್ಯಾತ್ಮದ ಕೇಂದ್ರವಾಗಿ ಬೆಳೆದು ನಾಡಿಗೆ ಮಾದರಿಯಾಗಿದೆ ಎಂದು ಅಣ್ಣಪ್ಪ ಮಹಾರಾಜರು ಹೇಳಿದರು.
ಗ್ರಾಮದಲ್ಲಿ ಸದ್ಗುರು ರಾಯಲಿಂಗೇಶ್ವರ ಮಹಾಪ್ರಭುಗಳ ಪುಣ್ಯಾರಾಧನೆ ೨೩ನೇ ಜ್ಞಾನಯಜ್ಞ ಸಪ್ತಾಹ ಸಮಾರೋಪ ನಿಮಿತ್ತ ಈಚೆಗೆ ಹಮ್ಮಿಕೊಂಡಿದ್ದ ಸರ್ವಧರ್ಮ ಸಭೆಯಲ್ಲಿ ಮಾತನಾಡಿದ ಅವರು, ಧಾರ್ಮಿಕ, ಶಿಕ್ಷಣ, ಸಾಮಾಜಿಕ ಕ್ಷೇತ್ರಗಳಲ್ಲಿ ಅವಿರತವಾಗಿ ಸೇವೆ ಸಲ್ಲಿಸುತ್ತಿರುವ ಅಭಿನವ ಗುರುಲಿಂಗ ಜಂಗಮ ಶ್ರೀಗಳ ಕಾರ್ಯ ಶ್ಲಾಘನೀಯ ಎಂದರು.
ಸಾತಾರಾದ ಅಶೋಕ ಮಹಾರಾಜರು ಮಾತನಾಡಿ, ಪ್ರವಚನ ಆಲಿಸುವ ಮೂಲಕ ಜೀವನ ಪಾವನಗೊಳಿಸಿಕೊಳ್ಳಬೇಕು ಎಂದರು.
ಅಭಿನವ ಗುರುಲಿಂಗಜಂಗಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅವರಾದಿ ಮಲ್ಲಿಕಾರ್ಜುನ ಮಹಾರಾಜರು, ಹಲಸಂಗಿ ಮುತ್ತಣ್ಣ ಮಹಾರಾಜರು, ಸಂಸ್ಥೆಯ ಕಾರ್ಯಾಧ್ಯಕ್ಷ ಗಿರೀಶ ಬಸರಗಿ, ಶಂಕರ ಮಹಾರಾಜರು, ಸುರೇಶ ಗೌಡರ, ಶೇಗುಣಸಿ ಭೀಮಣ್ಣ ಶಾಸ್ತ್ರೀ, ಪ್ರಾಂಶುಪಾಲ
ಶಿವಗುರು ಬಸರಗಿ, ಪ್ರಾಚಾರ್ಯ ಸಂಗಮೆಶ ಬಸರಗಿ ಇತರರಿದ್ದರು.