ಭಕ್ತ ಕುಂಬಾರ ಸಂಘದ ರಜತ ಮಹೋತ್ಸವದಲ್ಲಿ ವಿಜಯಪುರ ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಮಾತನಾಡಿದರು. ಮಹೇಶಾನಂದ ಸ್ವಾಮೀಜಿ, ಆನಂದ ಕುಂಬಾರ, ಕಾಶೀನಾಥ ಶ್ರೀ, ಶಿವಶರಣಾನಂದ ಶ್ರೀ, ಬಸವೇಶ್ವರ ಸ್ವಾಮೀಜಿ, ಶಿವಪ್ರಸಾದ ದೇವರು, ಸಿದ್ಧಪ್ರಸಾದ ಸ್ವಾಮೀಜಿ, ಗಿರಿಜಾನಂದ ಸ್ವಾಮೀಜಿ ಇತರರಿದ್ದರು.
ಕಾಗವಾಡ: ಕುಂಬಾರ ಸಣ್ಣ ಸಮುದಾಯವಾಗಿದ್ದೂ, ಪ್ರಾಮಾಣಿಕವಾಗಿ ಕಾಯಕ ಮಾಡುತ್ತದೆ. ಮಣ್ಣು ಉಪಯೋಗಿಸಿ, ಪಾತ್ರೆಗಳನ್ನು ಮಾಡಿ, ಸಮಾಜಕ್ಕೆ ನೀಡುವ ಕುಂಬಾರ ಸಮುದಾಯ ಕಾಯಕವೇ ಕೈಲಾಸವೆಂಬ ಬಸವಣ್ಣನವರ ನುಡಿಗೆ ಅನ್ವರ್ಥವಾಗಿದೆ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಹೇಳಿದರು.
ಉಗಾರ ಖುರ್ದ ಜೈನ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಭಕ್ತ ಕುಂಬಾರ ಪಟ್ಟಣ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವ ಮತ್ತು ಶಿವಶರಣ ಕುಂಬಾರ ಗುಂಡಯ್ಯನವರ ಸ್ಮರಣೋತ್ಸವ ಸಮಾರಂಭದಲ್ಲಿ ಮಾತನಾಡಿ, 25 ವರ್ಷಗಳ ಹಿಂದೆ ಕುಂಬಾರ ಸಮುದಾಯದವರು ಸ್ಥಾಪಿಸಿರುವ ಸಂಘ ಇಂದು ಹೆಮ್ಮರವಾಗಿ ಬೆಳೆದು, ಸಮಾಜದ ಪ್ರಗತಿಗೆ ಶ್ರಮಿಸುತ್ತಿದ್ದು, ಪ್ರಗತಿಪಥದಲ್ಲಿ ಸಾಗಲಿ ಎಂದರು. ಹಂಚಿನಾಳದ ಮಹೇಶಾನಂದ ಸ್ವಾಮೀಜಿ ಮಾತನಾಡಿ, ಕಾಯಕಯೋಗಿ ಶಿವಶರಣ ಕುಂಬಾರ ಗುಂಡಯ್ಯನವರ ಪ್ರೇರಣೆಯೊಂದಿಗೆ ಪ್ರಗತಿ ಸಾಧಿಸಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಸಂಸ್ಕಾರ ನೀಡಬೇಕು ಎಂದರು.
ಆನಂದ ಕುಂಬಾರ ಮಾತನಾಡಿದರು. ಗುಳೇದಗುಡ್ಡದ ಕಾಶೀನಾಥ ಶ್ರೀ, ಚಿಕ್ಕಾಲಗುಡ್ಡದ ಶಿವಶರಣಾನಂದ ಶ್ರೀ, ಐನಾಪುರ-ಕೃಷ್ಣಾ ಕಿತ್ತೂರಿನ ಬಸವೇಶ್ವರ ಸ್ವಾಮೀಜಿ, ಮಂಗಸೂಳಿ ರಾಜಯೋಗಿ ನಾಗಲಿಂಗ ಮಹಾಋಷಿ, ಚಿಂಚಣಿ ಶಿವಪ್ರಸಾದ ದೇವರು, ಚಿಂಚಲಿ ಸಿದ್ಧಪ್ರಸಾದ ಸ್ವಾಮೀಜಿ, ಕನಕೊಳದ ಗಿರಿಜಾನಂದ ಸ್ವಾಮೀಜಿ, ಬೆಳಗಾವಿ ಡಾ.ವೀರೇಶ್ವರ ಸ್ವಾಮಿ, ಕುಂಬಾರ ಸಮುದಾಯದ ಹಿರಿಯರಾದ ಬಸವರಾಜ ಕುಂಬಾರ, ಹುಚ್ಚೇಶ ಕುಂಬಾರ, ಮಲ್ಲಿಕಾರ್ಜುನ ಕುಂಬಾರ, ಮೇಘಾ ಕುಂದರಗಿ ಅನಿಸಿಕೆ ಹಂಚಿಕೊಂಡರು. ಕುಂಬಾರ ಸಮುದಾಯದ ಮಾಜಿ ಸೈನಿಕರು, ಸಾಧಕರು, ಗಣ್ಯರು, ಸಾಧಕ ವಿದ್ಯಾರ್ಥಿಗಳು ಹಾಗೂ ಹಿರಿಯ ದಂಪತಿಯನ್ನು ಸನ್ಮಾನಿಸಲಾಯಿತು. ಬೆಳಗ್ಗೆ ಸುಮಂಗಲೆಯರು ಕೃಷ್ಣಾ ನದಿಗೆ ಪೂಜೆ ಸಲ್ಲಿಸಿ ಕುಂಭ ಮೆರವಣಿಗೆ ಮುಖಾಂತರ ಮಹಾದೇವ ಮಂದಿರಕ್ಕೆ ಆಗಮಿಸಿ ಶಿವಲಿಂಗಕ್ಕೆ ಜಲಾಭಿಷೇಕ ಮಾಡಿದರು. ಬಳಿಕ ಕುಂಬಾರ ಗುಂಡಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಸುಭಾಸ ಕುಂಬಾರ, ಉಪಾಧ್ಯಕ್ಷ ಅಪ್ಪಾಸಾಬ ಕುಂಬಾರ, ನಿರ್ದೇಶಕರಾದ ಯೋಗೇಶ ಕುಂಬಾರ, ಅರುಣ ಕುಂಬಾರ, ದತ್ತಾ ಕುಂಬಾರ, ಆನಂದ ಕುಂಬಾರ, ಯಶವಂತ ಕುಂಬಾರ, ಶಿವಶಂಕರ ಕುಂಬಾರ, ವೀರಭದ್ರ ಕುಂಬಾರ, ಕಸ್ತೂರಿ ಕುಂಬಾರ, ಪುಷ್ಪಾ ಕುಂಬಾರ, ಹನುಮಂತ ನಾಯಿಕ, ಶಂಕರ ನಡೋಣಿ, ಪ್ರಧಾನ ಕಾರ್ಯದರ್ಶಿ ಸುಜಾತ ಕುಂಬಾರ ಇತರರಿದ್ದರು. ಅಣ್ಣಾಸಾಬ ಕುಂಬಾರ ನಿರೂಪಿಸಿದರು.