ಬಾಡಗಿ ಗ್ರಾಮದಲ್ಲಿ ಕೋಣಮ್ಮದೇವಿ ಮೂರ್ತಿ ಪ್ರತಿಷ್ಠಾಪನೆ ಮತ್ತು ಕಲಶಾರೋಹಣ ಜರುಗಿತು. ಶರಣಯ್ಯ ಸ್ವಾಮೀಜಿ, ಸದಾಶಿವ ಹೊನವಾಡಮಠ, ಸಂಗಯ್ಯ ಹಿರೇಮಠ, ಲಕ್ಷ್ಮಿಬಾಯಿ ಹುದ್ದಾರ, ಮೈತ್ರಾ ಉಮರಾಣಿ ಇತರರಿದ್ದರು. 
ಬೆಳಗಾವಿ

ಕಷ್ಟ ಕಾಲದಲ್ಲಿ ಕೈಹಿಡಿಯುವ ಸಂಸ್ಕಾರ

ಅರಟಾಳ: ಕೋಣಮ್ಮ ದೇವಿ ಮೇಲೆ ನಂಬಿಕೆ ಇಟ್ಟು ನಡೆದರೆ ಪುಣ್ಯ ಲಭಿಸುತ್ತದೆ. ಸಾಕ್ಷಾತ್ ಪಾರ್ವತಿಮಾತೆ

ರೂಪವೇ ಕೋಣಮ್ಮದೇವಿ ಎಂದು ಬಾಡಗಿ

ಶರಣಯ್ಯ ಸ್ವಾಮೀಜಿ ಹೇಳಿದರು.


ಸಮೀಪದ ಬಾಡಗಿ ಗ್ರಾಮದ ಕೋಣಮ್ಮದೇವಿ ದೇವಸ್ಥಾನದಲ್ಲಿ ಮಂಗಳವಾರ ದೇವಿ ಮೂರ್ತಿ ಪ್ರತಿಷ್ಠಾಪನೆ ಮತ್ತು ಕಲಶಾರೋಹಣ ನೆರವೇರಿಸಿ ಮಾತನಾಡಿ, ದಾನ, ಧರ್ಮ ಮಾಡುವುದನ್ನು ರೂಢಿಸಿಕೊಳ್ಳಬೇಕು. ಸಂಸ್ಕಾರ ನಮ್ಮನ್ನು ಕಷ್ಟ ಕಾಲದಲ್ಲಿ ಕೈಹಿಡಿಯುತ್ತದೆ. ಕುಂಭಮೆರವಣಿಗೆ ಮತ್ತು ಸುಮಂಗಲೆಯರಿಗೆ ಉಡಿ ತುಂಬುವುದು ಪುಣ್ಯದ ಕೆಲಸ ಎಂದರು.
ತುಂಗಳದ ಸದಾಶಿವ ಹೊನವಾಡಮಠ, ಸಂಗಯ್ಯ ಹಿರೇಮಠ ಮಾತನಾಡಿದರು. ಮಲ್ಲಪ್ಪ ಉಮರಾಣಿ, ಮಹಾಂತೇಶ ಅಮೃತಶೆಟ್ಟಿ, ರಾಮಣ್ಣ ಹುನ್ನೂರ, ಸಿದ್ದು ದಳವಾಯಿ, ಸಂಗಪ್ಪ ಮಮದಾಪುರ, ಸತ್ಯಪ್ಪ ಮಮದಾಪುರ, ಬಸವರಾಜ ಉಮರಾಣಿ, ಯಲ್ಲವ್ವ ಮಮದಾಪುರ, ಲಕ್ಷ್ಮಿಬಾಯಿ ಹುದ್ದಾರ, ಮೈತ್ರಾ ಉಮರಾಣಿ, ಮಹಾದೇವಿ ನೇಮಗೌಡ, ಭುವನೇಶ್ವರಿ ಮುಚ್ಚಂಡಿ, ಮುತ್ತುಪ್ಪ ಮಮದಾಪುರ, ದೇವೇಂದ್ರ ನೇಮಗೌಡ ಇತರರಿದ್ದರು.