ಸಿಟಿಇ ಸಂಸ್ಥೆಯ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆ ಹಾಗೂ ಆಂಗ್ಲ ಮಾಧ್ಯಮ ಶಾಲೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ದಿವ್ಯಾನಿ ದೇಸಾಯಿ ಅವರನ್ನು ಸನ್ಮಾನಿಸಲಾಯಿತು. ಡಾ.ಮಿಥುನ ದೇಶಪಾಂಡೆ, ಅನಿತಾ ಜೋಶಿ ಇತರರಿದ್ದರು. 
ಬೆಳಗಾವಿ

ತಂತ್ರಜ್ಞಾನಾಧಾರಿತ ಬೋಧನಾ ಸಾಧನ ಬಳಕೆ ಅಗತ್ಯ

ಚಿಕ್ಕೋಡಿ: ಶಿಕ್ಷಣ ವ್ಯವಸ್ಥೆಗೆ ಅನುಗುಣವಾಗಿ ಆಧುನಿಕ ಬೋಧನಾ ವಿಧಾನ ಮತ್ತು ತಂತ್ರಜ್ಞಾನ ಆಧಾರಿತ ಬೋಧನಾ ಸಾಧನಗಳ ಬಳಕೆ ಅತ್ಯಗತ್ಯ ಎಂದು ಮುಖ್ಯ ಸಂಪನ್ಮೂಲ ವ್ಯಕ್ತಿ ದಿವ್ಯಾನಿ ದೇಸಾಯಿ ತಿಳಿಸಿದರು.
ಸಿಟಿಇ ಸಂಸ್ಥೆಯ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆ ಹಾಗೂ ಆಂಗ್ಲ ಮಾಧ್ಯಮ ಶಾಲೆಯ ಆಶ್ರಯದಲ್ಲಿ ಶಿಕ್ಷಕರಿಗಾಗಿ ನವೀನ ಬೋಧನಾ ಪರಿಕರ ಮತ್ತು ತಂತ್ರ ಎಂಬ ವಿಷಯದ ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿ, ವಿದ್ಯಾರ್ಥಿ ಕೇಂದ್ರಿತ ಕಲಿಕೆಗೆ ಶಿಕ್ಷಕರು ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಸಿಬಿಎಸ್‌ಇ ಶಾಲೆಗಳ ಜಿಲ್ಲಾ ಸಂಯೋಜಕ ಡಾ.ಮಿಥುನ ದೇಶಪಾಂಡೆ ಮಾತನಾಡಿ, ಶಿಕ್ಷಕರ ವೃತ್ತಿಪರ ಸಾಮರ್ಥ್ಯ ವೃದ್ಧಿಗೆ ಹಾಗೂ ಬೋಧನೆಯಲ್ಲಿ ಹೊಸ ವಿಧಾನ ಅಳವಡಿಸಿಕೊಳ್ಳಲು ಕಾರ್ಯಾಗಾರ ಸಹಕಾರಿ ಎಂದರು. ಕಾರ್ಯಾಗಾರದಲ್ಲಿ ಶಿಕ್ಷಕರ ಬೋಧನಾ ಕೌಶಲವನ್ನು ಪರಿಣಾಮಕಾರಿಯಾಗಿ ಅಭಿವೃದ್ಧಿಪಡಿಸಲು ವಿವಿಧ ವಿಧಾನ, ಉಪಯುಕ್ತ ಸಲಹೆ ಹಾಗೂ ಪ್ರಾಯೋಗಿಕ ಚಟುವಟಿಕೆ ಪರಿಚಯಿಸಿದರು.
ಸಂಸ್ಥೆ ಪ್ರಾಂಶುಪಾಲ ಅನಿತಾ ಜೋಶಿ, ಮಹಾಂತೇಶ ಮಲಾಬಾದೆ ಇತರರಿದ್ದರು.