ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪ ಐಸಿಎಆರ್ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರಕ್ಕೆ ಮಹಾರಾಷ್ಟ್ರದ ರೈತರ ನಿಯೋಗ ಭೇಟಿ ನೀಡಿತು. ಡಾ.ಮಂಜುನಾಥ ಚೌರಡ್ಡಿ, ಅಭಿನಂದನ ಕರಾಡ, ಪ್ರಮೋದ ಅಹಿರೆ, ಡಾ.ಗುರುರಾಜ ಕೌಜಲಗಿ ಇತರರಿದ್ದರು.
ಬೆಳಗಾವಿ: ರೈತರ ಆದಾಯ ಹೆಚ್ಚಿಸಲು ಆಧುನಿಕ ತಂತ್ರಜ್ಞಾನ ಅಳವಡಿಕೆ, ಬೆಳೆಗಳ ಮೌಲ್ಯವರ್ಧನೆ, ಆಧುನಿಕ ಕೃಷಿ ಉಪಕರಣಗಳ ಬಳಕೆ ಹಾಗೂ ಸುಧಾರಿತ ತಳಿಗಳ ಬಳಕೆ ಅಗತ್ಯ ಎಂದು ಕೆಎಲ್‌ಇ ಕೆವಿಕೆ ಮುಖ್ಯಸ್ಥ ಡಾ.ಮಂಜುನಾಥ ಚೌರಡ್ಡಿ ಹೇಳಿದರು.
ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪ ಐಸಿಎಆರ್ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆತ್ಮ ಯೋಜನೆ ಹಾಗೂ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಕೈಗೊಂಡಿರುವ ತಾಂತ್ರಿಕ ಘಟಕಗಳ ಅಧ್ಯಯನಕ್ಕಾಗಿ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಿಂದ ಗುರುವಾರ ಆಗಮಿಸಿದ್ದ 30 ರೈತ ಉತ್ಪಾದಕ ಕಂಪನಿಗಳ ರೈತರ ನಿಯೋಗಕ್ಕೆ ಮಾಹಿತಿ ಭೇಟಿ ನೀಡಿ ಮಾತನಾಡಿ, ಬೆಳೆ ನಿರ್ವಹಣೆ, ಮಣ್ಣಿನ ಆರೋಗ್ಯ, ಈರುಳ್ಳಿ, ತರಕಾರಿ ಮತ್ತು ಭತ್ತ ಬೆಳೆಯುವಲ್ಲಿ ತೊಡಗಿರುವ ರೈತರಿಗೆ ಸಂಯೋಜಿತ ಕೀಟ ನಿರ್ವಹಣೆ, ಜೈವಿಕ ಗೊಬ್ಬರಗಳ ಬಳಕೆ ಮತ್ತು ಮಣ್ಣಿನ ಫಲವತ್ತತೆ ಕಾಪಾಡುವ ಸುಧಾರಿತ ಕ್ರಮಗಳ ಕುರಿತು ಮಾರ್ಗದರ್ಶನ ನೀಡಲಾಯಿತು.
ರೈತರು ಕೃಷಿ ವಿಜ್ಞಾನ ಕೇಂದ್ರದ ಪ್ರಾತ್ಯಕ್ಷಿಕೆ ತೋಟಗಳು, ಸುಧಾರಿತ ಕೃಷಿ ತಂತ್ರಜ್ಞಾನ ಘಟಕಗಳ ಕಾರ್ಯ ಹಾಗೂ ಕೃಷಿ ಚಟುವಟಿಕೆಗಳಲ್ಲಿ ಯಂತ್ರೋಪಕರಣ ಬಳಕೆ ಮತ್ತು ಮಣ್ಣು ಪರೀಕ್ಷೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಆತ್ಮ ಯೋಜನಾ ನಿರ್ದೇಶಕ ಅಭಿನಂದನ ಕರಾಡ, ಸಂಪರ್ಕ ಅಧಿಕಾರಿ ಪ್ರಮೋದ ಅಹಿರೆ, ಡಾ.ಗುರುರಾಜ ಕೌಜಲಗಿ ಇತರರಿದ್ದರು.