ನಗರದ ಕೆಎಲ್​ಇ ಸಂಸ್ಥೆಯ ರಾಜಾ ಲಖಮಗೌಡ ವಿಾನ ಮಹಾವಿದ್ಯಾಲಯದಲ್ಲಿ ಈಚೆಗೆ ಆಯೋಜಿಸಿದ್ದ ರಾಷ್ಟ್ರೀಯ ತಂತ್ರಾನ ದಿನಾಚಾರಣೆ ಕಾರ್ಯಕ್ರಮದಲ್ಲಿ ಡಾ.ಕುಲದೀಪ ಸಾಂಬ್ರೇಕರ ಅವರನ್ನು ಪೊ.ರೋಹಿತ ದೇಶಪಾಂಡೆ ಸ್ವಾಗತಿದರು. ಡಾ.ಪ್ರವಿಣ ದೇವಾಂಗದ ಇತರರಿದ್ದರು. 
ಬೆಳಗಾವಿ

ಕೃತಕ ಬುದ್ಧಿಮತ್ತೆ ಬಳಕೆ ನೈತಿಕವಾಗಿರಲಿ

ಬೆಳಗಾವಿ: ನವ ಯುಗದ ಸವಾಲಗಳನ್ನು ಎದುರಿಸಲು ನಾವೀನ್ಯತೆಯಿಂದ ಕೂಡಿದ ಸಂಶೋಧನೆ ಮತ್ತು ಉದ್ಯಮಶೀಲತೆಯತ್ತ ಗಮನ ಹರಿಸುವಂತೆ ವಿದ್ಯಾರ್ಥಿಗಳಿಗೆ ಜಿಐಟಿ ಕಾಲೇಜಿನ ಗಣಕಯಂತ್ರ ವಿಭಾಗದ ಮುಖ್ಯಸ್ಥ ಡಾ.ಕುಲದೀಪ ಸಾಂಬ್ರೇಕರ ಕರೆ ನೀಡಿದರು.
ನಗರದ ಕೆಎಲ್​ಇ ಸಂಸ್ಥೆಯ ರಾಜಾ ಲಖಮಗೌಡ ವಿಾನ ಮಹಾವಿದ್ಯಾಲಯದ ಈಚೆಗೆ ಬಿಸಿಎ ವಿಭಾಗದಿಂದ ರಾಷ್ಟ್ರೀಯ ತಂತ್ರಾನ ದಿನಾಚಾರಣೆ ಅಂಗವಾಗಿ ಆಯೋಜಿದ್ದ ಅಂತರ್ಗತ ಬೆಳವಣಿಗೆ ಜವಾಬ್ದಾರಿಯುತ ನಾವೀನ್ಯತೆ ಎಂಬ ವಿಷಯ ಕುರಿತು ಅವರು ಮಾತನಾಡಿದರು.
ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಕಲಿಕೆ ಮತ್ತು ಡಿಜಿಟಲ್​ ರೂಪಾಂತರದಂತಹ ಉದಯೋನ್ಮುಖ ತಂತ್ರಾನಗಳು ನೈತಿಕವಾಗಿ ಮತ್ತು ಜವಾಬ್ದಾರಿಯುತವಾಗಿ ಬಳಸಿದಾಗ ದೇಶದ ಅಭಿವೃದ್ಧಿ ಸಾಧ್ಯ.ಇದು ಸಮಾಜದ ಮೇಲೆ ಹೇಗೆ ಸಕರಾತ್ಮಕ ಪರಿಣಾಮ ಬೀರುತ್ತದೆ ಎಂದರು.
ಬಿಸಿಎ ಸಂಯೋಜಕ ಪೊ.ರೋಹಿತ ದೇಶಪಾಂಡೆ ಮಾತನಾಡಿ ಇಂದಿನ ವಿದ್ಯಾರ್ಥಿಗಳು ವಿಾನ ಮತ್ತು ತಂತ್ರಾನ ಯುಗದಲ್ಲಿರುವ ಅನೇಕ ಅವಕಾಶಗಳನ್ನು ಸ್ವೀಕರಿಸಿ ಸವಾಲುಗಳನ್ನು ಎದುರಿಸಬೇಕೆಂದರು. ಐಐಸಿ ಸಂಯೋಜಕಿ ಪೊ.ಪಲ್ಲವಿ ಮುಧೋಳ,ಸಂಚಾಲಕ ಡಾ.ಪ್ರವಿಣ ದೇವಾಂಗದ ಇತರರಿದ್ದರು.