ಬೈಲಹೊಂಗಲದಲ್ಲಿ ಹರ್ ಘರ್ ತಿರಂಗಾ ಅಭಿಯಾನ ಅಂಗವಾಗಿ ಹಮ್ಮಿಕೊಂಡಿದ್ದ ತಿರಂಗಾ ಯಾತ್ರೆಯಲ್ಲಿ ಡಾ.ವಿಶ್ವನಾಥ ಪಾಟೀಲ, ವಿಜಯ ಮೆಟಗುಡ್ಡ, ಬಸವರಾಜ ನೇಸರಗಿ, ಬಿ.ಬಿ.ಸಂಗನಗೌಡರ ಇತರರಿದ್ದರು.
ಬೈಲಹೊಂಗಲ: ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಬಿಜೆಪಿ ಮಂಡಲದ ವತಿಯಿಂದ ನಗರದಲ್ಲಿ ಗುರುವಾರ ತಿರಂಗಾ ಯಾತ್ರೆಗೆ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹಾಗೂ ಬಿಜೆಪಿ ಮುಖಂಡ ವಿಜಯ ಮೆಟಗುಡ್ಡ ಚಾಲನೆ ನೀಡಿದರು.
ವೀರರಾಣಿ ಕಿತ್ತೂರು ಚನ್ನಮ್ಮ ಸಮಾಧಿ ಸ್ಥಳದಿಂದ ಆರಂಭಗೊಂಡ ತಿರಂಗಾ ಯಾತ್ರೆ ಹಳೆಯ ಹನುಮಂತ ದೇವರ ದೇವಸ್ಥಾನ, ಬಸ್ ನಿಲ್ದಾಣ ಮಾರ್ಗವಾಗಿ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಸಂಚರಿಸಿತು. ಯಾತ್ರೆಯುದ್ದಕ್ಕೂ ದೇಶಭಕ್ತಿಯ ಘೋಷಣೆಗಳ ಜತೆಗೆ ನೂರಾರು ತ್ರಿವರ್ಣ ಧ್ವಜ ರಾರಾಜಿಸಿದವು.
ಶಾಸಕ ಡಾ.ವಿಶ್ವನಾಥ ಪಾಟೀಲ ಹಾಗೂ ಬಿಜೆಪಿ ಮುಖಂಡ ವಿಜಯ ಮೆಟಗುಡ್ಡ ಮಾತನಾಡಿ, ರಾಷ್ಟ್ರ ಗೌರವದ ಸಂಕೇತವಾಗಿರುವ ತ್ರಿವರ್ಣ ಧ್ವಜ ಪ್ರತಿಯೊಬ್ಬ ಭಾರತೀಯನಲ್ಲೂ ಏಕತೆ, ಹೆಮ್ಮೆ ಹಾಗೂ ದೇಶಾಭಿಮಾನ ಜಾಗೃತಗೊಳಿಸುತ್ತದೆ. ತಿರಂಗಾ ಯಾತ್ರೆ ದೇಶಭಕ್ತಿಯ ಸಂದೇಶ ಸಾರುತ್ತದೆ ಎಂದರು.
ದೇಶದ ಏಕತೆ, ಅಖಂಡತೆ ಹಾಗೂ ಸಾರ್ವಭೌಮತೆಯ ಪ್ರತೀಕವಾಗಿರುವ ರಾಷ್ಟ್ರಧ್ವಜದ ಗೌರವವನ್ನು ಪ್ರತಿಯೊಬ್ಬರೂ ಕಾಪಾಡಬೇಕು. ಯುವಜನತೆ ಹಾಗೂ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ವೃದ್ಧಿಸುವಲ್ಲಿ ಇಂತಹ ಕಾರ್ಯಕ್ರಮ ಮಹತ್ವದ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.
ಪ್ರಾಚಾರ್ಯ ಡಾ.ಸಿ.ಬಿ.ಗಣಾಚಾರಿ, ಗುರು ಮೆಟಗುಡ್ಡ, ರಾಜು ಕುಡಸೋಮಣ್ಣವರ, ನಿಂಗಪ್ಪ ಚೌಡನ್ನವರ, ಬಸವರಾಜ ನೇಸರಗಿ, ಬಿ.ಬಿ.ಸಂಗನಗೌಡರ, ಪ್ರಪುಲ ಪಾಟೀಲ, ಆನಂದ ತುರಮರಿ, ರವಿ ತುರಮರಿ, ರತ್ನಾ ಗೋಧಿ, ಗಂಗಪ್ಪ ಗುಗ್ಗರಿ, ಶ್ರೀಕಾಂತ ಶಿರಹಟ್ಟಿ, ಅಶೋಕ ಗುಂಡ್ಲೂರ, ಸಿದ್ಧಾರೂಢ ಹೊಂಡಪ್ಪನವರ, ಜಗದೀಶ ಬೂದಿಹಾಳ, ಲಕ್ಕಪ್ಪ ಕಾರಗಿ, ವಿಶಾಲ ಬೊಗೂರ, ರಿತೇಶ ಪಾಟೀಲ, ರಾಜು ಹೊಸಟ್ಟಿ, ಶಿವರಾಜ ರುದ್ರಪ್ಪನವರ, ಶಿವಪ್ರಸಾದ ಪಾಟೀಲ, ಗೌಡಪ್ಪ ಹೊಸಮನಿ, ಸುವರ್ಣಾ ರಾಮದುರ್ಗ, ವಿದ್ಯಾ ಚಿಕ್ಕಮಠ ಇತರರಿದ್ದರು. ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.