ಯಳ್ಳೂರ ರಸ್ತೆಯ ಕೆಎಲ್​ಇ ಶತಮಾನೋತ್ಸವ ಚಾರಿಟಬಲ್​ ಆಸ್ಪತ್ರೆಯಲ್ಲಿ ಈಚೆಗೆ ಆಯೋಜಿಸಿದ್ದ ವಿಶ್ವ ದಾದಿಯರ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಸಚಿನ ಸಬನಿಸ್​, ಡಾ.ಎಚ್​.ಬಿ.ರಾಜಶೇಖರ, ಡಾ.ಸಂಜಯ ಕಂಬಾರ, ಶರೀಫಾ ಸಯ್ಯದ್​, ಭಾರತಿ ಲಿಂಗಾಯತ, ದಾಾಯಿಣಿ ಹಿರೆಮಠ ಇತರರಿದ್ದರು. 
ಬೆಳಗಾವಿ

ದಾದಿಯರ ಸೇವಾಭಾವ ಪ್ರಶಾಂಸಾರ್ಹ

ಬೆಳಗಾವಿ: ಸ್ವ ಹಿತಾಸಕ್ತಿಯನ್ನು ಬದಿಗಿರಿಸಿ ಪರರ ಆರೋಗ್ಯದ ಕಾಳಜಿವಹಿಸುವ ದಾದಿಯರ ವೃತ್ತಿಯು ನಿಜಕ್ಕೂ ಪ್ರಶಂಸನೀಯ ಎಂದು ಬೆಳಗಾವಿ ಫೇರೊಕಾಸ್ಟ್​ ನಿರ್ದೇಶಕ ಸಚಿನ ಸಬನಿಸ್​ ಅಭಿಮತ ವ್ಯಕ್ತಪಡಿಸಿದರು.
ಇಲ್ಲಿನ ಯಳ್ಳೂರ ರಸ್ತೆಯ ಕೆಎಲ್​ಇ ಶತಮಾನೋತ್ಸವ ಚಾರಿಟಬಲ್​ ಆಸ್ಪತ್ರೆಯಲ್ಲಿ ಈಚೆಗೆ ಆಯೋಜಿಸಿದ್ದ ವಿಶ್ವ ದಾದಿಯರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಒಬ್ಬ ನರ್ಸ್​ ಯಾವುದೇ ರೀತಿಯ ಸಂಬಂಧಗಳಿಲ್ಲದಿದ್ದರೂ, ಅಪರಿಚಿತ ರೋಗಿಯನ್ನು ತನ್ನ ಮಗುವಿನಂತೆಯೇ ಕಾಳಜಿಯಿಂದ ನೋಡಿಕೊಂಡು,ಆತನು ಆರೋಗ್ಯಹೊಂದಿ ಸಂತಸದ ಜೀವನ ನಡೆಸುವಂತೆ ಮಾಡುತ್ತಾರೆ ಎಂದು ಶ್ಲಾಸಿದರು.
ಯುಎಸ್​ಎಮ್​ ಕೆಎಲ್​ಇ ನಿರ್ದೇಶಕ ಡಾ.ಎಚ್​.ಬಿ.ರಾಜಶೇಖರ ಮಾತನಾಡಿ, ಆಸ್ಪತ್ರೆಯ ಮೂಲ ಶಕ್ತಿಯೇ ದಾದಿಯರು. ಅವರು ರೋಗಿಗಳೊಂದಿಗೆ ಸದಾ ಮೃದುಭಾಷಿಯಾಗಿ, ಕರುಣೆಯಿಂದ, ಸಹಾನುಭೂತಿಯಿಂದ ವರ್ತಿಸಬೇಕು. ಅವರ ಮಾತುಗಳು ರೋಗಿಗಳಲ್ಲಿ ಆತ್ಮಸ್ಥೆ$ರ್ಯ ತುಂಬುವ ಶಕ್ತಿಯಾಗಿದೆ ಎಂದರು.
ಆಸ್ಪತ್ರೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನವೀನ್​ ಎನ್​. ಮಾತನಾಡಿ,ಆಸ್ಪತ್ರೆಯ ಸೇವಾ ವ್ಯವಸ್ಥೆಯಲ್ಲಿ ದಾದಿಯರ ಪಾತ್ರ ಅತ್ಯಂತ ಮಹತ್ವದಾಗಿದ್ದು, ದಿನದ 24 ಗಂಟೆಗಳ ಸೇವೆಯಲ್ಲಿ ನರ್ಸಸ್​ಗಳು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತಿದ್ದು, ಆರೋಗ್ಯ ಸೇವೆಯ ಬೆನ್ನೆಲುಬಾಗಿದ್ದಾರೆ ಎಂದು ಬಣ್ಣಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಸ್ಪತ್ರೆಯ ವೈದ್ಯಕಿಯ ಅಧೀಕ್ಷಕರಾದ ಡಾ.ಸಂಜಯ ಕಂಬಾರ ಮಾತನಾಡಿ, ಆಸ್ಪತ್ರೆಯಲ್ಲಿ ನರ್ಸಿಂಗ್​ ಸೇವೆ ಅತ್ಯಂತ ಪ್ರಮುಖ, ಜವಾಬ್ದಾರಿಯುತ ಹಾಗೂ ಸೂಕ್ಷ$್ಮ ಕರ್ತವ್ಯವಾಗಿದೆ ಎಂದು ಹೇಳಿದರು. ನರ್ಸಿಂಗ್​ ಅಧೀಕ್ಷಕಿ ಶರೀಫಾ ಸಯ್ಯದ್​, ಉಪ ಅಧೀಕ್ಷಕಿ ಭಾರತಿ ಲಿಂಗಾಯತ, ದಾಾಯಿಣಿ ಹಿರೆಮಠ ಇತರರಿದ್ದರು.