ಶಿರಗುಪ್ಪಿಯಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರದಲ್ಲಿ ಅಭಯಕುಮಾರ ಅಕಿವಾಟೆ, ಪದ್ಮರಾಜ ಪಾಟೀಲ, ಡಾ.ಜೆ.ಎನ್.ಭೋಮಾಜ, ಡಾ.ನೀತಾ ಭೋಮಾಜ, ಡಾ.ವೈಶಾಲಿ ಭೋಮಾಜ ಇತರರಿದ್ದರು.
- ಅಭಯಕುಮಾರ ಅಕಿವಾಟೆ ಮೆಚ್ಚುಗೆ
- ಆರೋಗ್ಯ ತಪಾಸಣೆ ಉಚಿತ ಶಿಬಿರ
ಕಾಗವಾಡ: ದಿ.ದಾದಾ ಭೋಮಾಜ ಅವರು ತಮ್ಮ ಪೀಳಿಗೆಗೆ ಉತ್ತಮ ಶಿಕ್ಷಣ ನೀಡಿದರ ಪರಿಣಾಮ ಇಂದು ಈ ಭಾಗದಲ್ಲಿ ಭೋಮಾಜ ಪರಿವಾರದ ಅನೇಕ ಹೆಸರಾಂತ ವೈದ್ಯರು ಸೇವೆ ನೀಡುತ್ತಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಭೋಮಾಜ ಕುಟುಂಬದವರ ಸೇವೆ ಶ್ಲಾಘನೀಯ ಎಂದು ಶಿರಗುಪ್ಪಿ ವಕೀಲ ಅಭಯಕುಮಾರ ಅಕಿವಾಟೆ ಹೇಳಿದರು.
ತಾಲೂಕಿನ ಶಿರಗುಪ್ಪಿ ಗ್ರಾಮದ ಉಗಾರ ರಸ್ತೆಯಲ್ಲಿರುವ ೧೦೦೮ ಪಾರ್ಶ್ವನಾಥ ಜೈನ ಭವನದಲ್ಲಿ ಶಿರೋಳ ತಾಲೂಕಿನ ಖಿದ್ರಾಪುರದ ದಾದಾ ಪಾಯಪ್ಪ ಭೋಮಾಜ ಮತ್ತು ಅಮ್ಮಕ್ಕ ದಾದಾ ಭೋಮಾಜ ಸಾರ್ವಜನಿಕ ಸೇವಾ ಪ್ರತಿಷ್ಠಾನದಿಂದ ಭಾನುವಾರ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಭೋಮಾಜ ಪರಿವಾರದ ವೈದ್ಯರು ಹಾಗೂ ಮಿರಜ ಪಟ್ಟಣ ಮತ್ತು ಶಿರಗುಪ್ಪಿ ಗ್ರಾಮದ ವೈದ್ಯರೊಂದಿಗೆ ಆರೋಗ್ಯ ಉಚಿತ ತಪಾಸಣೆ ಶಿಬಿರ ಹಮ್ಮಿಕೊಂಡಿರುವುದರಿಂದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಬಹಳ ಅನುಕೂಲವಾಗಿದೆ ಎಂದರು.
ಭೋಮಾಜ ಸಾರ್ವಜನಿಕ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪದ್ಮರಾಜ ಪಾಟೀಲ ಅನಿಸಿಕೆ ಹಂಚಿಕೊಂಡರು. ಶಿಬಿರದಲ್ಲಿ ೪೦೦ಕ್ಕೂ ಅಧಿಕ ಜನರು ಆರೋಗ್ಯ ತಪಾಸಣೆ ಲಾಭ ಪಡೆದುಕೊಂಡರು.
ಡಾ.ಜೆ.ಎನ್.ಭೋಮಾಜ, ಡಾ.ನೀತಾ ಭೋಮಾಜ, ಡಾ.ಎಂ.ಎನ್.ಭೋಮಾಜ, ಡಾ.ವೈಶಾಲಿ ಭೋಮಾಜ, ಡಾ.ಅರವಿಂದ ಲಾಂಡೆ, ಡಾ.ಶೋಭಾ ಲಾಂಡೆ, ಡಾ.ಶರದ ಭೋಮಾಜ, ಡಾ.ಪದ್ಮಪ್ರಿಯಾ ಭೋಮಾಜ, ಡಾ.ಪೂಜಾ ಭೋಮಾಜ, ಡಾ.ವಿಜಯ ಕುಲಕರ್ಣಿ, ಡಾ.ಅರಿಹಂತ ಪಾಟೀಲ, ಡಾ.ಯೋಗೇಶ ಜಂಬಗೆ, ಡಾ.ದೀಪಾಂಜಲಿ ಪಾಟೀಲ, ಡಾ.ಪದ್ಮಜಾ ಪಾಟೀಲ, ಡಾ.ವಿಕ್ರಾಂತ ಮಗದುಮ್ಮ, ಡಾ.ಸ್ವಪ್ನಿಲ ಅಮಾನಾಪುರೆ, ಸಿಬಿಕೆಎಸ್‌ಎಸ್ ಕಾರ್ಖಾನೆ ನಿರ್ದೇಶಕ ಮಹಾವೀರ ಕಾತ್ರಾಳೆ, ಶಾಂತಿಸಾಗರ ಸಹಕಾರಿ ಅಧ್ಯಕ್ಷ ವಿದ್ಯಾಸಾಗರ ಮಾನಗಾಂವೆ, ಬಾಬಾಸಾಹೇಬ ಕಾಗವಾಡೆ, ಅಶೋಕ ಕಾತ್ರಾಳೆ, ಅನಿಲ ಚೌಗುಲೆ, ಬಾಬು ಕಾರದಗೆ, ಶ್ರೇಯಾಂಶ ನಾಂದಣಿ, ಕಿರಣ ಬೋಲೆ, ಶಿರಗುಪ್ಪಿಯ ವೈದ್ಯರಾದ ಡಾ.ಅಮೋಲ ಸರಡೆ, ಡಾ.ಮನೋಜ ಮಿಣಚೆ, ಡಾ.ಜಿತೇಂದ್ರ ಖೋತ, ಡಾ.ಸುಕುಮಾರ ಚೌಗುಲೆ, ಡಾ.ರಾಜೇಂದ್ರ ಅಕಿವಾಟೆ, ಡಾ.ರವಿ ಕುರುಂದವಾಡೆ ಇತರರಿದ್ದರು.