ರಾಮದುರ್ಗದಲ್ಲಿ ಹೋಳಿ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ವಾಯ್ಸ ಆ್ ನೇಕಾರ ಪೇಟೆಯ ಸಿಜನ್-2 ಗ್ರಾೃಂಡ್ ಫಿನಾಲೆ ಕಾರ್ಯಕ್ರಮವನ್ನು ಮಲ್ಲಣ್ಣ ಯಾದವಾಡ ಉದ್ಘಾಟಿಸಿದರು. ಕುಬೇರ ಗರಡಿಮನಿ, ದೇವಾಂಗಮಠದ ಶಂಕ್ರಯ್ಯಸ್ವಾಮಿ ಇತರರಿದ್ದರು.
- ಡಿಸಿಸಿ ಬ್ಯಾಂಕ್ ನಿರ್ದೇಶಕ ಮಲ್ಲಣ್ಣ ಅಭಿಪ್ರಾಯ
- ಸಿಜನ್-2 ಗ್ರಾೃಂಡ್ ಫಿನಾಲೆ ಉದ್ಘಾಟನೆ
ರಾಮದುರ್ಗ: ಅನ್ನ ನೀಡುವ ರೈತರ ಹಾಗೂ ಮಾನ ಕಾಪಾಡುವ ನೇಕಾರರ ನಿಶ್ವಾರ್ಥ ಸೇವೆಯನ್ನು ಸದಾ ಸ್ಮರಿಸುತ್ತಿರಬೇಕು ಎಂದು ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಲ್ಲಣ್ಣ ಯಾದವಾಡ ಹೇಳಿದರು.
ನಗರದ ರಾಧಾಪುರ ಪೇಟೆಯಲ್ಲಿ ಹೋಳಿ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ವಾಯ್ಸ-ಆ್ ನೇಕಾರ ಪೇಟೆಯ ಸಿಜನ್-2 ಗ್ರಾೃಂಡ್ ಫಿನಾಲೆ ಕಾರ್ಯಕ್ರಮ ಬುಧವಾರ ಉದ್ಘಾಟಿಸಿ ಮಾತನಾಡಿ, ಆದ್ಯವಚನಕಾರ ದೇವರ ದಾಸೀಮಯ್ಯನವರು ಕೇವಲ ಒಂದೇ ಜಾತಿಗೆ ಸೀಮಿತರಾಗದೇ, ಸರ್ವ ಜನಾಂಗಕ್ಕೂ ತಮ್ಮ ವಚನಗಳ ಮೂಲಕ ಸಮಾನತೆಯ ಸಂದೇಶ ಸಾರಿದ್ದಾರೆ. ಅವರ ಆದರ್ಶ ಇಂದಿನ ಪೀಳಿಗೆ ಅರಿತುಕೊಳ್ಳಬೇಕಿದೆ ಎಂದರು.
ಶ್ರೀ ಬನಶಂಕರಿದೇವಿ ದೇವಾಂಗ ಸಮುದಾಯದ ಅಧ್ಯಕ್ಷ ಕುಬೇರ ಗರಡಿಮನಿ ಮಾತನಾಡಿ, ಕಳೆದ 15 ವರ್ಷಗಳಿಂದ ವಿವಿಧ ಸ್ಪರ್ಧೆ, ಜಾನಪದ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಮುಂದೆಯೂ ಹೆಚ್ಚಿನ ಕಾರ್ಯಕ್ರಮ ಹಮ್ಮಿಕೊಂಡು ಯುವ ಕಲಾವಿದರನ್ನು ಬೆಳೆಸಲಾಗುವುದು ಎಂದು ಹೇಳಿದರು.
ದೇವಾಂಗಮಠದ ಶಂಕ್ರಯ್ಯಸ್ವಾಮಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಜಗದೀಶ ಲಾಹೋಟಿ, ವಕೀಲ ರಾಜು ಕೋಪರ್ಡೆ, ಅಮರ ಧೂತ ಮಾತನಾಡಿದರು.
ಪುರಸಭೆ ಮಾಜಿ ಸದಸ್ಯ ಶಂಕರ ಸೂಳಿಭಾವಿ, ನಾರಾಯಣ ಹೂಲಿ, ದಶರಥ ಸೂಳಿಭಾವಿ, ಅಶೋಕ ಮೊರಬದ, ಸಂಗೀತ ಶಿಕ್ಷಕರಾದ ಪಿ.ಎಂ.ಹೂಗಾರ, ಸುರೇಶ ಚಂದರಗಿ, ಶಂಕರ ಗರಡಿಮನಿ, ಕೃಷ್ಣ ಕೊಳದೂರ, ಮನೋಜ ಕಾಂಕಾಣಿ, ಬಾಬಾಲಾಲ ಮಹಾತ, ಅಂಬರೀಷ ಬಟಕುರ್ಕಿ, ಸಂಗಮೇಶ ಉದಪುಡಿ, ವಕೀಲ ಸಂತೋಷ ದಾದನಟ್ಟಿ ಇತರರಿದ್ದರು.