ಬೋರಗಾಂವದಲ್ಲಿ ಬೋರವೆಲ್ ಕಾಮಗಾರಿಗೆ ಯುವ ಮುಖಂಡ ಉತ್ತಮ ಪಾಟೀಲ ಚಾಲನೆ ನೀಡಿದರು. ದಿಗಂಬರ ಕಾಂಬಳೆ, ರುಕ್ಸಾನಾ ಅಪರಾಜ, ಅಭಯಕುಮಾರ ಮಗದುಮ್ಮ, ಪಿಂಟು ಕಾಂಬಳೆ ಇತರರಿದ್ದರು. 
ಬೆಳಗಾವಿ

ಜನರ ಸಂಕಷ್ಟಕ್ಕೆ ಸ್ಪಂದಿಸಿದ ಸಂತೃಪ್ತಿ

ಬೋರಗಾಂವ: ದಲಿತ ಸಮುದಾಯದ ಅಭಿವೃದ್ಧಿಗೆ ಪಾಟೀಲ ಕುಟುಂಬದ ಕೊಡುಗೆ ಅಪಾರವಾಗಿದೆ. ಯುವ ಮುಖಂಡ ಉತ್ತಮ ಪಾಟೀಲ ಮತ್ತು ಉದ್ಯಮಿ ಅಭಿನಂದನ ಪಾಟೀಲ ಸಹ ದಲಿತ ಸಮುದಾಯದ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಜನರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದ್ದಾರೆ ಎಂದು ಪಪಂ ಅಧ್ಯಕ್ಷ ದಿಗಂಬರ ಕಾಂಬಳೆ ಹೇಳಿದರು.
ಥಲೋಬಾ ದೇವಸ್ಥಾನದಲ್ಲಿ ಅರಿಹಂತ ಉದ್ಯೋಗ ಸಮೂಹದಿಂದ ಭಾನುವಾರ ಹಮ್ಮಿಕೊಂಡಿದ್ದ ಬೋರವೆಲ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಲಿತ ಬಡಾವಣೆಯಲ್ಲಿರುವ ನೀರಿನ ಸಮಸ್ಯೆ ಅರಿತುಕೊಂಡ ಯುವ ಮುಖಂಡ ಉತ್ತಮ ಪಾಟೀಲ ತಕ್ಷಣವೇ ಅರಿಹಂತ ಗ್ರೂಪ್‌ನಿಂದ ಕೊಳವೆ ಬಾವಿ ತೋಡಿದ್ದಾರೆ ಎಂದರು.
ಯುವ ಮುಖಂಡ ಉತ್ತಮ ಪಾಟೀಲ, ಉಪಾಧ್ಯಕ್ಷೆ ರುಕ್ಸಾನಾ ಅಪರಾಜ, ಪಪಂ ಸದಸ್ಯ ಅಭಯಕುಮಾರ ಮಗದುಮ್ಮ, ಪಿಂಟು ಕಾಂಬಳೆ, ರಮೇಶ ಕುರಳೆ, ರಾಜು ಗಜರೆ, ವಿಲಾಸ ಕಾಂಬಳೆ, ಅಣ್ಣಾಸಾಹೇಬ ಹಿರೇಮನಿ, ತಾನಾಜಿ ಮಧಾಳೆ, ಮುಕುಂದ ಕಾಂಬಳೆ, ಭೈಯ್ಯಾ ಅಪರಾಜ, ಬಬಲು ಮಾಧಾಳೆ, ಸಂಗ್ರಾಮ ಹಿರೇಮನಿ, ರಾವುಸಾಹೇಬ ಕಾಂಬಳೆ, ತಾತ್ಯಾಸಾಹೇಬ ಬಸಣ್ಣವರ, ಬಾಬಾಸಾಹೇಬ ವಾಸವಾಡೆ, ಸೋನು ಅಪರಾಜ, ಪುಂಡಲೀಕ ಹಿರೇಮನಿ, ಸುರೇಶ ಗೋಸಾವಿ ಇತರರಿದ್ದರು.