ಉಳ್ಳಾಗಡ್ಡಿ-ಖಾನಾಪುರ: ಗ್ರಾಮದ ಜಾಗೃತ ದೇವತೆ ಮಹಾಲಕ್ಷ್ಮೀ ದೇವಿ ಜಾತ್ರೆ 2028ಕ್ಕೆ ಆಚರಣೆ ಮಾಡಲು ನಿರ್ಣಯ ಕೈಗೊಂಡು ಮಂಗಳವಾರ ಕೋಣ ಬಿಡುವ ಕಾರ್ಯಕ್ರಮ ಜರುಗಿತು.
ಬೆಳಗ್ಗೆ ಮಹಾಲಕ್ಷ್ಮೀ ದೇವಿ, ದಮನ ದೇವಿ ಮತ್ತು ಗುಡ್ಡದ ಲಕ್ಷ್ಮೀ ದೇವಿಯರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಮಹಾಲಕ್ಷ್ಮೀ ದೇವಿ ಪಲ್ಲಕ್ಕಿ ಉತ್ಸವ ನಡೆಯಿತು. ಗ್ರಾಮದ ಗಿರಿಗೌಡರ ಮನೆತನದವರು ಕೋಣ ಬಿಡುವ ಕಾರ್ಯಕ್ರಮ ನಡೆಸಿದರು.
ವಿವಿಧ ವಾದ್ಯಮೇಳದೊಂದಿಗೆ ಹಕ್ಕುದಾರರ ಮನೆಗಳಿಗೆ ಕೋಣ ಕರೆದುಕೊಂಡು ಹೋಗಿ ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಮಹಾಲಕ್ಷ್ಮೀ ದೇವಸ್ಥಾನದಿಂದ ಕೋಣವನ್ನು ಬೀಳ್ಕೊಡಲಾಯಿತು.
ಗ್ರಾಮದ ಹಕ್ಕುದಾರರಾದ ಬಾಬಾಗೌಡ ಪಾಟೀಲ, ರುದ್ರಗೌಡರ, ಲಖಮಗೌಡ ಪಾಟೀಲ, ಜಿ.ವಿ.ಕುಲಕರ್ಣಿ, ಮಹಾರುದ್ರ ಜರಳಿ, ಸುನೀಲ ಚನ್ನಬಸನವರ, ರಾಜು ಕುಲಕರ್ಣಿ, ಪ್ರಸಾದ ಕುಲಕರ್ಣಿ, ಈಶ್ವರ ಚೌಗಲಾ, ರಾಜು ಅವಟೆ ಇತರರಿದ್ದರು.