ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಈಚೆಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಅವರು ಜನತಾ ದರ್ಶನ ನಡೆಸಿ, ಸಾರ್ವಜನಿಕರ ಅಹವಾಲು ಆಲಿಸಿದರು.
ಕಬ್ಬೂರ: ಆಧುನಿಕ ದಿನದಲ್ಲಿ ವಿಜ್ಞಾನ, ತಂತ್ರಜ್ಞಾನದ ಪಾತ್ರ ಪ್ರಮುಖ. ನಿತ್ಯ ಜೀವನದಲ್ಲಿ ವೈಜ್ಞಾನಿಕ ಭಾವನೆ ಬೆಳೆಸಿಕೊಂಡು ಪ್ರತಿ ಸಂಗತಿಯನ್ನು ಸೂಕ್ಷ್ಮವಾಗಿ ಅವಲೋಕಿಸಬೇಕು ಎಂದು ಕೊಣ್ಣೂರ ಶಿಕ್ಷಣ ಸಮೂಹ ಸಂಸ್ಥೆ ಪ್ರಾಂಶುಪಾಲ ಪ್ರೊ.ಬಸವರಾಜ ಕೊಣ್ಣೂರ ಹೇಳಿದರು.
ಪಟ್ಟಣದ ಬಿ.ಜಿ.ಬೆಲ್ಲದ ಶಿಕ್ಷಣ ಮತ್ತು ಸಮಾಜ ಸೇವಾ ಸಂಸ್ಥೆಯ ಓಂ ಸೆಂಟ್ರಲ್ ಪಬ್ಲಿಕ್ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಗಣಿತ ಹಾಗೂ ವಿಜ್ಞಾನ ಮಾದರಿಗಳ ವಸ್ತುಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಾಂಶುಪಾಲ ಡಾ.ಮಹೇಂದ್ರ ಕೆ.ಆರ್. ಮಾತನಾಡಿ, ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನೆ, ಹೊಸ ಆವಿಷ್ಕಾರ, ವಿಮರ್ಶಾತ್ಮಕ ದೃಷ್ಟಿಕೋನ, ಸತ್ಯಶೋಧನೆ ಮುಂತಾದ ವೈಜ್ಞಾನಿಕ ಗುಣ ಬೆಳೆಸಿಕೊಂಡು ವಿಜ್ಞಾನಿಗಳಾಗಿ ಹೊರಹೊಮ್ಮಬೇಕು ಎಂದರು.
ಶಿಕ್ಷಕರಾದ ಪ್ರವೀಣ ಪಾಟೀಲ, ಶ್ರೀಧರ ಮಾನೆ, ರಜನಿಕಾಂತ ತಳವಾರ, ಸಂಗಪ್ಪ ಹಾದಿಮನಿ, ಶ್ರೀನಿವಾಸ ಕೆರಿಮನಿ, ಸಿದ್ದಪ್ಪ ಮುರಚಿಟ್ಟಿ, ರಾಕೇಶ ನಾಯಕ, ಲಕ್ಷ್ಮೀ ಜಿವಣಿ, ಶ್ರೇಯಾ ಮುಗಳಿ, ಅಕ್ಷತಾ ಅಂಗಡಿ, ಸುಶ್ಮಿತಾ ಪಟ್ಟಣಕುಡಿ, ಉಪ ಪ್ರಾಂಶುಪಾಲ ರಾಜು ಮಹಿಪತಿ ಇತರರಿದ್ದರು.