ಬೆಳಗಾವಿಯಲ್ಲಿ ಹಮ್ಮಿಕೊಂಡಿದ್ದ ಭರತೇಶ ಶಿಕ್ಷಣ ಸಂಸ್ಥೆ ಸಂಸ್ಥಾಪಕರ ದಿನಾಚರಣೆಯಲ್ಲಿ ಯುವರಾಜ ಜೈನ, ರಶ್ಮಿತಾ ಜೈನ, ಡಾ.ವಿನೋದ ದೊಡ್ಡಣ್ಣವರ, ಡಾ.ರವಿಕಿರಣ ಯಾದವ ಇತರರು ಇದ್ದರು.
ಬೆಳಗಾವಿ: ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಶಿಕ್ಷಕರು ಮಹತ್ವದ ಪಾತ್ರ ವಹಿಸುತ್ತಾರೆ ಎಂದು ಮೂಡಬಿದರೆಯ ಎಕ್ಸಲಂಟ್ ಸಂಸ್ಥೆಗಳ ಅಧ್ಯಕ್ಷ ಯುವರಾಜ ಜೈನ ಹೇಳಿದರು.
ಇಲ್ಲಿನ ಭರತೇಶ ಶಿಕ್ಷಣ ಟ್ರಸ್ಟ್ ಸಂಸ್ಥಾಪಕ ದಿ.ಕೋಮಲಣ್ಣ ದೊಡ್ಡಣ್ಣವರ ಜನ್ಮದಿನ ಮತ್ತು ಸಂಸ್ಥೆಯ ಸಂಸ್ಥಾಪಕರ ದಿನದ ಪ್ರಯುಕ್ತ ಅರಿಹಂತಗಿರಿ ಕ್ಯಾಂಪಸ್‌ನಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು.
ಎಕ್ಸಲಂಟ್ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ ಮಾತನಾಡಿ, ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವ ಮತ್ತು ಗೊಂದಲವಿಲ್ಲದೆ ಅವರು ನೆಲೆಗೊಳ್ಳಲು ಸಹಾಯ ಮಾಡುವ ಶಕ್ತಿ ಶಿಕ್ಷಣಕ್ಕಿದೆ ಎಂದರು.
ಭರತೇಶ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ವಿನೋದ ದೊಡ್ಡಣವರ ಮಾತನಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಕಾರ್ಯಕ್ರಮಗಳ ಮೂಲಕ ನಮ್ಮ ಸಂಸ್ಥೆ ಸಾಧನೆ ಮಾಡುತ್ತ ಬೆಳವಣಿಗೆ ಹೊಂದಿದೆ ಎಂದರು.
ಸಂಸ್ಥೆಯ ನಿವೃತ್ತ ಅಧ್ಯಾಪಕರು, ಸಿಬ್ಬಂದಿ ಹಾಗೂ 25 ವರ್ಷ ಸೇವೆ ಪೂರ್ಣಗೊಳಿಸಿದವರನ್ನು ಹಾಗೂ ಭರತೇಶ ಹೋಮಿಯೋಪಥಿಕ್ ವೈದ್ಯಕೀಯ ಕಾಲೇಜಿನ ಹಳೇ ವಿದ್ಯಾರ್ಥಿ ಡಾ.ರವಿಕಿರಣ ಯಾದವ ಅವರನ್ನು ಸನ್ಮಾನಿಸಲಾಯಿತು.
ಆಡಳಿತ ಮಂಡಳಿ ಸದಸ್ಯ ಶಶಾಂಕ ಲೆಂಗಡೆ ಮತ್ತು ಅನುಪಮಾ ಶಿರಹಟ್ಟಿ ಪರಿಚಯಿಸಿದರು. ಆಡಳಿತ ಮಂಡಳಿ ಸದಸ್ಯ ರಾಜೇಂದ್ರ ರಾಮಗೊಂಡ ವಂದಿಸಿದರು.