ಸಂಪಗಾವಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಬಾಬಾಸಾಹೇಬ ಪಾಟೀಲ ಉದ್ಘಾಟಿಸಿದರು. ಚನ್ನವೀರ ಸ್ವಾಮೀಜಿ, ಪ್ರಭುನೀಲಕಂಠ ಸ್ವಾಮೀಜಿ ಇತರರಿದ್ದರು
ತಾಲೂಕಿನ ಸಂಪಗಾಂವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ನಂ.4ರಲ್ಲಿ ವಿಶ್ವ ಮಾನವ ಬಂದುತ್ವ ವೇದಿಕೆ ಹಾಗೂ ಶೈಕ್ಷಣಿಕ ಜಾಗೃತ ವೇದಿಕೆ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ 25ನೇ ವರ್ಷದ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಪಗಾವಿ ಕಟಾಪೂರಿಮಠದ ಷಟಸ್ಥಲ ಬ್ರಹ್ಮ ಚನ್ನವೀರ ಸ್ವಾಮೀಜಿ, ಬೈಲಹೊಂಗಲದ ಮೂರು ಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ನಿರ್ದೇಶಕ ಡಾ.ಮಹಾಂತೇಶ ಶಾಸೀ ಆರಾದ್ರಿಮಠ, ಮಂಜುನಾಥ ಶಿಡ್ಲೆವ್ವಗೋಳ,
ತಹಸೀಲ್ದಾರ್ ಹನುಮಂತ ಶಿರಹಟ್ಟಿ, ಜಿಪಂ ಮಾಜಿ ಸದಸ್ಯೆ ರೋಹಿಣಿ ಪಾಟೀಲ, ಡಿಸಿಸಿ ಬ್ಯಾಂಕ್ ನಿರ್ದೇಶಕ ನಾನಾಸಾಹೇಬ ಪಾಟೀಲ, ಶಂಕ್ರೆಪ್ಪ ಸಿದ್ನಾಳ, ಡಾ.ಬಿ.ಬಿ.ಪುಟ್ಟಿ, ದುಂಡಪ್ಪ ಒಕ್ಕುಂದ, ಎಸ್.ಜಿ.ಸಿದ್ನಾಳ, ಮಹಾದೇವಿ ಕುಡಒಕ್ಕಲಿಗ, ಮಹೇಶ ಹೂಲಿ, ಪಿಡಿಒ ವಿಜಯಲಕ್ಷ್ಮೀ ಆನಿಗೋಳ, ಅನಿಲ ನೇಸರಗಿ, ಹನುಮಂತ ಶಿಡ್ಲೆವ್ವಗೋಳ ಇತರರಿದ್ದರು.