ಐನಾಪುರ ಪಟ್ಟಣದ ಸಿದ್ಧೇಶ್ವರ ದೇವಸ್ಥಾನದ ವತಿಯಿಂದ ಶಾಸಕಿ ಶಶಿಕಲಾ ಜೊಲ್ಲೆ ಅವರನ್ನು ಸನ್ಮಾನಿಸಲಾಯಿತು. ಸೋಮೇಶ್ವರ ಶ್ರೀ, ಪ್ರೇಮಲತಾ ರೆಡ್ಡಿ ಇತರರಿದ್ದರು.  
ಬೆಳಗಾವಿ

ಮಠಮಾನ್ಯಗಳ ಪಾತ್ರ ಹಿರಿದು

ಐನಾಪುರ: ಅಧ್ಯಾತ್ಮದ ತವರೂರಾಗಿರುವ ಭಾರತದಲ್ಲಿನ ದೇವಸ್ಥಾನ ಹಾಗೂ ಮಠ ಮಂದಿರಗಳಲ್ಲಿ ಶಾಂತಿ ಸಿಗುತ್ತದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ಪಟ್ಟಣದ ಸಿದ್ಧೇಶ್ವರ ದೇವಸ್ಥಾನದಲ್ಲಿ ನೂತನ ಪೌಳಿ ಉದ್ಘಾಟನೆ ಹಾಗೂ ಲಕ್ಷ ದೀಪೋತ್ಸವದ ಕೊನೆಯ ದಿನವಾದ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ವಿದೇಶಿ ಸಂಸ್ಕೃತಿಗೆ ಮಾರು ಹೋಗದೆ ಮೂಲ ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಬರುತ್ತಿರುವ ಮಠಮಾನ್ಯಗಳ ಪಾತ್ರ ಹಿರಿದಾಗಿದೆ. ಶ್ರೀ ಸಿದ್ಧೇಶ್ವರ ದೇವಸ್ಥಾನದಲ್ಲಿ ಪ್ರತಿದಿನ ಅನೇಕ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡು ಲಕ್ಷಾಂತರ ಜನರಿಗೆ ಪ್ರಸಾದ ವಿತರಿಸುತ್ತಿರುವುದು ಶ್ಲಾಘನೀಯ ಎಂದರು.
ಶಾಸಕ ರಾಜು ಕಾಗೆ, ಮಾಜಿ ಸಚಿವ ಶ್ರೀಮಂತ ಪಾಟೀಲ, ಸಕ್ಕರೆ ಕಾರ್ಖಾನೆ ಅಧ್ಯಕ್ಷ ಕಲ್ಲಪ್ಪ ಮಗೆನ್ನವರ, ಮಣಕಾಪುರದ ಸೋಮಲಿಂಗ ಶ್ರೀ, ಕೌಲಗುಡ್ಡದ ಅಮರೇಶ್ವರ ಶ್ರೀ ಮಾತನಾಡಿದರು. ರಾಜುಗೌಡ ಪಾಟೀಲ, ಪ್ರವೀಣ ಗಾಣಿಗೇರ, ಅರುಣ ಗಾಣಿಗೇರ, ತಮ್ಮಣ್ಣ ಪಾರಶೆಟ್ಟಿ, ಸುಭಾಷ ಪಾಟೀಲ, ಪ್ರೇಮಲತಾ ರೆಡ್ಡಿ, ಕುಮಾರ ಅಪರಾಜ, ಪ್ರಕಾಶ ಕೊರಬು, ರಾಜು ಪೋತದಾರ, ದಾದಾ ಜಂತನ್ನವರ, ದಾದಾ ಪಾಟೀಲ, ಚಮನರಾವ್ ಪಾಟೀಲ, ಸಂಜು ಬಿರಡಿ, ಅಣ್ಣಾಸಾಹೇಬ ದೂಗನವರ, ಸೋಮಲಿಂಗ ಒಡೆಯರ, ಅಮಸಿದ್ಧ ಒಡೆಯರ, ಸುರೇಶ ಗಾಣಿಗೇರ, ವಿಶ್ವನಾಥ ನಾಮಧಾರ ಇತರರಿದ್ದರು.