ಮುನವಳ್ಳಿ ಪುರಸಭೆ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ಮಳೆನೀರು ಸಂಗ್ರಹಣೆ ಅಭಿಯಾನಕ್ಕೆ ಪುರಸಭೆ ಅಧ್ಯಕ್ಷ ಈಶ್ವರ ಕರೀಕಟ್ಟಿ ಚಾಲನೆ ನೀಡಿದರು. ಡಿ.ಡಿ.ಕಿನ್ನೂರಿ, ಎಂ.ಎಂ.ತಿಮ್ಮಾಣಿ, ಗುರುಶಾಂತ ಚಂದರಗಿ, ಸಮೀವುಲ್ಲಾ ಚೂರಿಖಾನ್ ಇತರರಿದ್ದರು.
ಮುನವಳ್ಳಿ ಪುರಸಭೆ ವ್ಯಾಪ್ತಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಳೆನೀರು ಸಂಗ್ರಹಣೆ ಅಭಿಯಾನದಲ್ಲಿ ಮಾತನಾಡಿ, ಬೇಸಿಗೆಯಲ್ಲಿ ನೀರಿನ ಅಭಾವ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಲು ಮತ್ತು ಮಳೆಗಾಲದ ಪ್ರತಿ ಹನಿ ಸದ್ಬಳಕೆ ಮಾಡಿಕೊಳ್ಳಲು ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಎಂ.ಎಂ.ತಿಮ್ಮಾಣಿ ಮಾತನಾಡಿ, ನೀರು ಜೀವಾಮೃತ. ಮಳೆಗಾಲದಲ್ಲಿ ಸುರಿಯುವ ನೀರು ಚರಂಡಿ ಪಾಲಾಗದಂತೆ ತಡೆದು, ಮನೆಗಳಲ್ಲೇ ಸಂಗ್ರಹಿಸಿ ಅಥವಾ ಭೂಮಿಗೆ ಇಂಗಿಸುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ ಎಂದರು.
ಪುರಸಭೆ ಉಪಾಧ್ಯಕ್ಷ ಡಿ.ಡಿ.ಕಿನ್ನೂರಿ, ಪುರಸಭೆ ಸದಸ್ಯರಾದ ಗುರುಶಾಂತ ಚಂದರಗಿ, ಸಮೀವುಲ್ಲಾ ಚೂರಿಖಾನ, ಪಂಚು ಬಾರಕೇರ, ಶಿವು ರೇವಡಗಿ, ವಿನಾಯಕ ಕಟ್ಟೇಕಾರ, ಹನುಮಂತ ಹಿರೇಮೇತ್ರಿ, ಕರೀಂ ಚೋಪದಾರ, ಬಸವರಾಜ ಹಲಗಿ, ಮಧು ಕೌಜಲಗಿ, ಯಲ್ಲಪ್ಪ ಭಜಂತ್ರಿ, ಸುರೇಶ ಮಾನೆ ಇತರರಿದ್ದರು.