ನಿಪ್ಪಾಣಿಯಲ್ಲಿ ಪತ್ರಕರ್ತರು ಮತ್ತು ಪೊಲೀಸರ ಮಧ್ಯೆ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಕ್ಕೆ ಬಾಲಕಿ ಚಾಲನೆ ನೀಡಿದಳು. ಬಿ.ಎಸ್.ತಳವಾರ, ಶಿವರಾಜ ನಾಯಿಕವಾಡೆ, ರಮೇಶ ಪವಾರ, ಅಮೋಲ ನಾಗರಾಳೆ ಇತರರು ಇದ್ದರು.
ನಿಪ್ಪಾಣಿ: ಸ್ಥಳೀಯ ಪೊಲೀಸರ ಮತ್ತು ತಾಲೂಕು ಪತ್ರಕರ್ತರ ಸಂಘದ ಮಧ್ಯೆ ಭಾನುವಾರ ನಗರದಲ್ಲಿ ಸೌಹಾರ್ದಯುತ ಎರಡು ಕ್ರಿಕೆಟ್ ಪಂದ್ಯ ನಡೆದವು. ಇಲ್ಲಿನ ಅಕ್ಕೋಳ ರಸ್ತೆಯ ಶ್ರೀ ಹಾಲಸಿದ್ಧನಾಥ ದೇವಾಲಯದ ಎದುರಿನ ಮೈದಾನದಲ್ಲಿ ಜರುಗಿದ ಎರಡೂ ಪಂದ್ಯಗಳಲ್ಲಿ ಪೊಲೀಸರ ತಂಡವು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ, ಎರಡರಲ್ಲೂ ಗೆಲುವು ಸಾಧಿಸಿದವು. ಪೊಲೀಸರು ಮತ್ತು ಪತ್ರಕರ್ತರ ನಡುವಿನ ಸ್ನೇಹಪರ ಪಂದ್ಯವನ್ನು ಪ್ರೇಕ್ಷಕರು ಆನಂದಿಸಿದರು. ಪತ್ರಕರ್ತರ ಸಂಘದ ಅಧ್ಯಕ್ಷ ಅಮೋಲ ನಾಗರಾಳೆ ಮಾತನಾಡಿ, ನಿರ್ದಿಷ್ಟ ಸಮಯದ ನಂತರ ಇಂತಹ ಪಂದ್ಯಗಳನ್ನು ನಿಯಮಿತವಾಗಿ ಆಯೋಜಿಸುವ ಚಿಂತನೆ ನಡೆಸಲಾಗುವುದು ಎಂದರು. ಸ್ಥಳೀಯ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಶಿವರಾಜ ನಾಯಕವಾಡೆ, ಬಸವೇಶ್ವರ ಚೌಕ ಪೊಲೀಸ್ ಠಾಣೆಯ ಪಿಎಸ್‌ಐ ರಮೇಶ ಪವಾರ, ಪತ್ರಕರ್ತರ ಸಂಘದ ಕಾರ್ಯದರ್ಶಿ ರಾಹುಲ ಪಾಟೀಲ, ಸುನೀಲ ಗಿರಿ, ಅಶ್ವಿನ ಅಮ್ಮನಗಿ, ವಿಠ್ಠಲ ಕೇಸರಕರ ಇತರರು ಇದ್ದರು.