ಸನ್ಮತಿ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಡಿಜಿಟಲ್ ಬೋರ್ಡ್ ಉದ್ಘಾಟನೆಯಲ್ಲಿ ಡಾ.ಎನ್.ಎ.ಮಗದುಮ್ಮ, ಶಶಿಕಾಂತ ಪುರಮವಾರ, ಶಾಂತಿನಾಥ ಪಾಲಗೌಡರ, ಸಂಗೀತಾ ಪಾಲಗೌಡರ ಇತರರಿದ್ದರು.
- ಡಾ.ಎನ್.ಎ.ಮಗದುಮ್ಮ ಮೆಚ್ಚುಗೆ
- ಸ್ಮಾರ್ಟ್ ಬೋರ್ಡ್ ಉದ್ಘಾಟನೆ
ಕಾಗವಾಡ: ಗ್ರಾಮೀಣ ಭಾಗದ ಶಾಲೆಯೊಂದನ್ನು ಸಂಪೂರ್ಣ ಸ್ಮಾರ್ಟ್ ಶಾಲೆಯಾಗಿ ಪರಿವರ್ತಿಸಿ, ಇಲ್ಲಿಯ ಮಕ್ಕಳನ್ನು ಸ್ಮಾರ್ಟ್ ಮಕ್ಕಳಾಗಿಸಲು ಪ್ರಯತ್ನಿಸುತ್ತಿರುವ ಆಡಳಿತ ಮಂಡಳಿ ಹಾಗೂ ದಾನಿಗಳ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಅಂಕಲಿಯ ಗೊಮ್ಮಟೇಶ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ.ಎನ್.ಎ.ಮಗದುಮ್ಮ ಹೇಳಿದರು.
ಶೇಡಬಾಳ ಪಟ್ಟಣದ ಸನ್ಮತಿ ಶಿಕ್ಷಣ ಸಹಕಾರ ಸಮಿತಿಯ ಸನ್ಮತಿ ವಿದ್ಯಾಲಯದಲ್ಲಿ ಶನಿವಾರ ಉದ್ಯಮಿ ಶಾಂತಿನಾಥ ಪಾಲಗೌಡರ ಪರಿವಾರದಿಂದ ನೀಡಿದ ೯ ಡಿಜಿಟಲ್ ಬೋರ್ಡ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ದಾನಿಗಳು ಸ್ಮಾರ್ಟ್ ಬೋರ್ಡ್ ನೀಡಿರುವುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಡಿಜಿಟಲ್ ಶಿಕ್ಷಣ ನೀಡಲು ಸಹಕಾರಿಯಾಗಿದೆ. ಶೇಡಬಾಳ ಪಟ್ಟಣ ದೇಶಕ್ಕೆ ಮಾದರಿಯಾಗಿದೆ ಎಂದರು.
ನಂತರ ಶಾಂತಿನಾಥ ಪಾಲಗೌಡರ ಪರಿವಾರದವರನ್ನು ಮತ್ತು ಶಿಕ್ಷಕರನ್ನು ಸನ್ಮಾನಿಸಲಾಯಿತು.
ಸಾಂಗಲಿಯ ಕೃಷ್ಣಾ-ಗೋದಾವರಿ ಬೀಜ ಉತ್ಪಾದನೆ ಮತ್ತು ಮಾರಾಟ ಸಂಸ್ಥೆ ಎಂಡಿ ಶಶಿಕಾಂತ ಪುರಮವಾರ, ಶಾಂತಿನಾಥ ಪಾಲಗೌಡರ, ಸಂಗೀತಾ ಪಾಲಗೌಡರ, ಸುಮಿತ ಪಾಲಗೌಡರ, ಪದ್ಮಜಾ ಪಾಲಗೌಡರ, ಸಹಕಾರ ಪಟ್ಟಣ ಬ್ಯಾಂಕ್‌ಗಳ ಮಹಾಮಂಡಳ ಮುಖ್ಯಕಾರ್ಯನಿರ್ವಹಣಾಧಿಕಾರಿ ಪುಂಡಲೀಕ ಕೆರೂರೆ, ಎಸ್‌ಎಸ್‌ಎಸ್ ಸಮಿತಿ ಅಧ್ಯಕ್ಷ ವಿನೋದ ಬರಗಾಲೆ, ಸನ್ಮತಿ ವಿದ್ಯಾಲಯದ ಅಧ್ಯಕ್ಷೆ ಸನ್ಮತಿ ಪಾಟೀಲ, ಮುಖ್ಯಶಿಕ್ಷಕಿ ಎಂ.ಎನ್.ಕಾಳೇನಟ್ಟಿ, ರಾಜು ನಾಂದ್ರೆ ಇತರರಿದ್ದರು.