ಸತ್ತಿಯಲ್ಲಿ ಹಮ್ಮಿಕೊಂಡಿದ್ದ ಯೋಗ, ಧ್ಯಾನ, ಇಷ್ಟಲಿಂಗ, ಪ್ರವಚನ ಕಾರ್ಯಕ್ರಮ ಸಮಾರಂಭದಲ್ಲಿ ನಿರಂಜನ ದೇವರು ಪಾಲ್ಗೊಂಡಿದ್ದರು. ಈರಯ್ಯ ಮಠಪತಿ, ದಾದಾಗೌಡ ಪಾಟೀಲ, ಮಲ್ಲಪ್ಪ ಹಂಚಿನಾಳಮ, ಅಶೋಕ ಜಗದೇವ ಇತರರಿದ್ದರು.
ನಂದೇಶ್ವರ: ದೈಹಿಕ, ಮಾನಸಿಕ ಆರೋಗ್ಯದ ಹಿತದೃಷ್ಟಿಯಿಂದ ಪ್ರತಿಯೊಬ್ಬರೂ ಪ್ರತಿದಿನ ಯೋಗ, ಧ್ಯಾನ ಹಾಗೂ ಇಷ್ಟಲಿಂಗ ಪೂಜೆಯಲ್ಲಿ ತೊಡಗಬೇಕು ಎಂದು ಆಧ್ಯಾತ್ಮಿಕ ಚಿಂತಕ ನಿರಂಜನ ದೇವರು ಹೇಳಿದರು.
ಸಮೀಪದ ಸತ್ತಿ ಗ್ರಾಮದಲ್ಲಿ ಲಿಂ.ಶ್ರೀ ಬಾಳಕೃಷ್ಣ ಮಹಾರಾಜರ ೨೮ನೇ ಪುಣ್ಯಾರಾಧನೆ ಕಾರ್ಯಕ್ರಮ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನ.೩೦ ರವರೆಗೆ ಪ್ರತಿದಿನ ಬೆಳಗ್ಗೆ ೫.೩೦ ರಿಂದ ೬.೩೦ ರವರೆಗೆ ಯೋಗ, ಧ್ಯಾನ ಕಾರ್ಯಕ್ರಮ, ೮ ರಿಂದ ೯ ರವರೆಗೆ ಇಷ್ಟಲಿಂಗ ಪೂಜೆ, ಸಂಜೆ ೭ ರಿಂದ ೮ ರವರೆಗೆ ಶರಣರ ಆದರ್ಶ ಬದುಕು ಕುರಿತು ಪ್ರವಚನ ಕಾರ್ಯಕ್ರಮ ಜರುಗಲಿದೆ. ಗ್ರಾಮಸ್ಥರೆಲ್ಲರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸಂಗಪ್ಪ ಶರಣರು, ಈರಯ್ಯ ಮಠಪತಿ, ದಾದಾಗೌಡ ಪಾಟೀಲ, ಮಲ್ಲಪ್ಪ ಹಂಚಿನಾಳ, ಮಲ್ಲಪ್ಪ ಬ್ಯಾಳಗೌಡರ, ಅಶೋಕ ಜಗದೇವ, ವಿಶ್ವನಾಥ ಪಾಟೀಲ, ಶಿವಪ್ಪ ಕರಿಹೊಳಿ, ರಾಜುಗೌಡ ಪಾಟೀಲ, ರಾಮಣ್ಣ ಸಿಂಧೂರ, ಡಾ.ಶ್ರೀಶೈಲ ಚೌಗಲಾ, ಚನ್ನಗೌಡ ಜಕ್ಕಪ್ಪನವರ, ಆನಂದ ರುದ್ರಗೌಡರ ಇತರರಿದ್ದರು.