ಸವದತ್ತಿಯಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಪದಾಧಿಕಾರಿಗಳ ಪ್ರಶಿಕ್ಷಣ ಅಭ್ಯಾಸ ವರ್ಗದ ಮೊದಲ ಹಂತದ ಕಾರ್ಯಕ್ರಮವನ್ನು ಸುಭಾಸ ಪಾಟೀಲ ಉದ್ಘಾಟಿಸಿದರು. ವಿರೂಪಾಕ್ಷ ಮಾಮನಿ, ರತ್ನಾ ಮಾಮನಿ, ಡಾ.ನಯನಾ ಭಸ್ಮೆ, ಸಂಜೀವಕುಮಾರ ನವಲಗುಂದ ಇತರರಿದ್ದರು. 
ಬೆಳಗಾವಿ

ಕಾರ್ಯಕರ್ತರ ಸಂಘಟನಾ ಬಲವೇ ಪಕ್ಷದ ಶಕ್ತಿ

ನಗರದ ಮಾಮನಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಭಾರತೀಯ ಜನತಾ ಪಕ್ಷದ ಪದಾಧಿಕಾರಿಗಳ ಪ್ರಶಿಕ್ಷಣ ಅಭ್ಯಾಸ ವರ್ಗದ ಮೊದಲ ಹಂತದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಪಕ್ಷದ ಸಿದ್ಧಾಂತ ಹಾಗೂ ಮಹಾನ್ ನಾಯಕರ ಆದರ್ಶ ಕಾರ್ಯಕರ್ತರು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಂಘಟನೆ ಬಲಿಷ್ಠವಾಗುತ್ತದೆ. ಕಾರ್ಯಕರ್ತರು ಸಮಾಜದಲ್ಲಿ ಸೇವಾ ಮನೋಭಾವದಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.
ಮುಖಂಡ ನಂದು ಗಾಯಕವಾಡ ಮಾತನಾಡಿ, ನಾಯಕರ ಬಲಿದಾನಗಳ ಲವಾಗಿ ಬಿಜೆಪಿ ಇಂದು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಕಾರ್ಯಕರ್ತರ ಸಂಘಟನೆಯಿಂದ ದೇಶದಲ್ಲಿ ರಾಜಕೀಯ ದೊಡ್ಡ ರಾಜಕೀಯ ಶಕ್ತಿಯಾಗಿ ಬೆಳೆಯಲು ಸಹಕಾರಿಯಾಗಿದೆ ಎಂದರು.ಮಂಡಲ ಅಧ್ಯಕ್ಷ ವಿರೂಪಾಕ್ಷ ಮಾಮನಿ ಮಾತನಾಡಿ, ಅಭ್ಯಾಸ ವರ್ಗ ಕಾರ್ಯಕರ್ತರ ವ್ಯಕ್ತಿತ್ವ ವಿಕಾಸ ಹಾಗೂ ನಾಯಕತ್ವ ಗುಣಗಳ ವೃದ್ಧಿಗೆ ಪೂರಕವಾಗಿದೆ. ಕಾರ್ಯಕರ್ತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮುಖಂಡರಾದ ಈರಣ್ಣ ಚಂದರಗಿ, ಸಂಜೀವಕುಮಾರ ನವಲಗುಂದ, ರತ್ನಾ ಮಾಮನಿ, ಡಾ.ನಯನಾ ಭಸ್ಮೆ, ಮಲ್ಲೇಶ್ವರ ಸೂಳೆಭಾವಿ, ಮಹಾದೇವ ಮೂರಗೋಡ, ಸುಭಾಸ ಗಿದಿಗೌಡ್ರ, ಬಸಯ್ಯ ಹಿರೇಮಠ, ಕೆ.ವಿ.ತಲ್ಲೂರಮಠ, ಬಸವರಾಜ ಕಾರದಗಿ, ಜಗದೀಶ ಶಿಂತ್ರಿ, ಈರಣ್ಣ ವೀರಶೆಟ್ಟಿ ಇತರರಿದ್ದರು.