ಬೆಳಗಾವಿ:ಬೇಸಿಗೆ, ಚಳಿಗಾಲ, ಮಳೆಗಾಲ ಹೀಗೆ ಹವಾಮಾನ ವೈಪರಿತ್ಯ ಹೆಚ್ಚಾದಂತೆ ತಣ್ಣನೆಯ ಬಿಯರ್‌ಗೆ ಬೇಡಿಕೆ ಕೂಡ ದುಪ್ಪಟ್ಟಾಗಿದ್ದು, ಬದಲಾಗುತ್ತಿರುವ ಬದುಕಿನ ಶೈಲಿ, ಹೊಸ ತಲೆಮಾರಿನ ಮನಸ್ಥಿತಿ ಮತ್ತು ಮದ್ಯ ಸಂಸ್ಕೃತಿಯ ವಿಸ್ತರಣೆಯ ಪ್ರತಿಬಿಂಬವಾಗಿ ಕಾಣುತ್ತಿದೆ.
ಹೌದು.ಒಂದು ಕಾಲದಲ್ಲಿ ಕೆಲವೇ ವರ್ಗದ ಜನರ ಆಯ್ಕೆಯಾಗಿದ್ದ ಬಿಯರ್, ಈಗ ನಗರದ ಪಬ್‌ಗಳಿಂದ ಹಿಡಿದು ಹಳ್ಳಿಯ ಜಾತ್ರೆಗಳವರೆಗೆ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸಿದೆ. ಮಾರುಕಟ್ಟೆಗೆ ಕಾಲಿಡುತ್ತಿರುವ ಹೊಸ ಬ್ರ್ಯಾಂಡ್‌ಗಳು, ಆಕರ್ಷಕ ಜಾಹೀರಾತುಗಳು ಮತ್ತು ಕೂಲ್ ಜೀವನಶೈಲಿಯ ಕಲ್ಪನೆ ಯುವ ಜನರನ್ನು ಸೆಳೆಯುತ್ತಿದೆ. ದರ ಏರಿದರೂ ಬೇಡಿಕೆ ಮಾತ್ರ ಕುಗ್ಗುತ್ತಿಲ್ಲ. ಬದಲಾಗಿ, ವರ್ಷದಿಂದ ವರ್ಷಕ್ಕೆ ಮಾರಾಟ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 680ಕ್ಕೂ ಮದ್ಯ ಅಂಗಡಿಗಳ ವ್ಯಾಪ್ತಿಯಲ್ಲಿ 2025 ಜುಲೈದಿಂದ 2026 ಜೂನ್ 31ರ ನಡುವಿನ ಅವಧಿಯಲ್ಲಿ ಬೆಳಗಾವಿ ಮಹಾನಗರ ಸೇರಿ ಜಿಲ್ಲೆಯಾದ್ಯಂತ ಅಂದಾಜು 110 ಕೋಟಿ ರೂ. ಅಧಿಕ ಮೌಲ್ಯದ ಬಿಯರ್ ಮಾರಾಟವಾಗುವ ಮೂಲಕ ದಾಖಲೆ ನಿರ್ಮಿಸಿದೆ.ಅಲ್ಲದೆ, ನಗರ ಪ್ರದೇಶಗಳಿಗಿಂತ ಗ್ರಾಮೀಣ ಭಾಗದಲ್ಲಿ ಬಿಯರ್ ಮಾರಾಟ ಮತ್ತು ಸೇವಿಸುವ ಪ್ರಮಾಣ ಶೇ.38ರಷ್ಟು ಹೆಚ್ಚಳವಾಗಿದೆ. ಸರ್ಕಾರದ ಖಜಾನೆಗೆ ಮದ್ಯದಿಂದ ಕೋಟಿ ಕೋಟಿ ರೂ.ಆದಾಯ ಹರಿದು ಬರುತ್ತಿದೆ. ಆದರೆ ಅದೇ ಸಮಯದಲ್ಲಿ ಆರೋಗ್ಯ ಸಮಸ್ಯೆಗಳ ಹೆಚ್ಚಾಗುತ್ತಿರುವುದು ಕೂಡ ಕಹಿ ಸತ್ಯ.
ಕಳೆದ ವರ್ಷ 48,218 ಸಾವಿರ ಬಾಕ್ಸ್ ಬಿಯರ್ ಮಾರಾಟ ಆಗಿತ್ತು. ಈ ವರ್ಷ 68,555 ಸಾವಿರ ಬಾಕ್ಸ್ ಬಿಯರ್ ಮಾರಾಟವಾಗಿದೆ. ಬೆಳಗಾವಿ, ಗೋಕಾಕ, ಸವದತ್ತಿ, ಬೈಲಹೊಂಗಲ, ಕಿತ್ತೂರು,ಅಥಣಿ, ರಾಯಬಾಗ,ಚಿಕ್ಕೋಡಿ, ಮೂಡಲಗಿ, ಹುಕ್ಕೇರಿ, ರಾಮದುರ್ಗ ತಾಲೂಕಿನ ನಗರ, ಗ್ರಾಮೀಣ ಭಾಗದಲ್ಲಿ ಬಿಯರ್ ಬೇಡಿಕೆ ಶೇ.41 ರಷ್ಟು ಹೆಚ್ಚಳವಾಗಿದೆ. ಶನಿವಾರ, ಭಾನುವಾರ ಸೇರಿ ಸರ್ಕಾರಿ ರಜೆ ದಿನಗಳಲ್ಲಿ, ಜಾತ್ರೆಗಳಲ್ಲಿ ಹಾಗೂ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಇತರೆ ಮದ್ಯದಗಿಂತ ವಿದೇಶಿ ಕಂಪನಿಯ ವಿವಿಧ ಬ್ರಾೃಂಡ್‌ಗಳ ಬಿಯರ್ ಮಾರಾಟ ಏರಿಕೆ ಕಂಡಿದೆ ಎನ್ನುತ್ತಾರೆ ಅಬಕಾರಿ ಅಧಿಕಾರಿಗಳು.
ಸ್ನೇಹ, ಸಂಭ್ರಮ ಮತ್ತು ಸಾಮಾಜಿಕ ಕೂಟಗಳ ಸಂಕೇತವಾಗಿ ಕಾಣಲಾಗುವ ಬಿಯರ ಇಂದು ಜಾಗತಿಕ ಮಾರುಕಟ್ಟೆಯಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಪಾನೀಯಗಳಲ್ಲಿ ಒಂದಾಗಿದೆ. ಹೀಗಾಗಿ ಬಯರ್ ಉತ್ಪಾದಕ ಕಂಪನಿ ಹಾಗೂ ಮಾರಾಟ ಸಂಸ್ಥೆಗಳನ್ನು ಗೌರವಿಸಿ ಸಂಭ್ರಮಿಸುವ ಉದ್ದೇಶದಿಂದ ಪ್ರತಿ ವರ್ಷ ಜಗತ್ತಿನಾದ್ಯಂತ ಆಗಸ್ಟ್ ಮೊದಲ ಶುಕ್ರವಾರ ಅಂತಾರಾಷ್ಟ್ರೀಯ ಬಿಯರ್ ದಿನ ಆಚರಿಸಿಕೊಂಡು ಬರುತ್ತಿರುವುದು ವಿಶೇಷ ಎನ್ನಲಾಗುತ್ತಿದೆ.
ಅಬಕಾರ ಇಲಾಖೆ ಮಾರಾಟ ಮಾಡುವ ಒಂದು ಬಾಕ್ಸ್‌ನಲ್ಲಿ 9 ಲೀಟರ್ ಮದ್ಯ ಇರುತ್ತದೆ. ಈ ವರ್ಷ 2026 ಜೂನ್ 31ರವರೆಗೆ ಮಾರಾಟವಾದ
68,555 ಬಾಕ್ಸ್ (6,16,995 ಲೀಟರ್) ಬಿಯರ್ ಮಾರಾಟವಾಗಿದೆ. ಸರ್ಕಾರಕ್ಕೆ ಕೋಟ್ಯಾಂತರ ರೂ. ಆದಾಯ ಬಂದಿದೆ. ಬಿಯರ್ ಮಾರಾಟ ಗುರಿ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ.
.................................
..............................
ಮಹಾನಗರಗಳಲ್ಲಿ ಮೈಕ್ರೋ ಬಿಯರ್ ಎಂದರೆ ಸಣ್ಣ ಪ್ರಮಾಣದ (ಬ್ರೂವರೀರ್ಸ್)ಲ್ಲಿ ತಯಾರಿಸುವವರ ಅಧಿಕ ಸಂಖ್ಯೆಯಲ್ಲಿರುವುದರಿಂದ ಬಿಯರ್‌ಮಾರಾಟ ಅಂಕಿ ಸಂಖ್ಯೆಗಳ ಸರಿಯಾಗಿ ಗೊತ್ತಾಗುವುದಿಲ್ಲ. ಮತ್ತೊಂದೆಡೆ ರಾಜ್ಯ ಸರ್ಕಾರ ಬಿಯರ್ ದರ ಕಡಿಮೆ ಮಾಡಿರುವುದರಿಂದ ಮಾರಾಟ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಬೇಸಿಗೆ ಕಾಲದಲ್ಲಿ ಬಿಯರ್ ಅಧಿಕ ಪ್ರಮಾಣದಲ್ಲಿ ಮಾರಾಟವಾಗುತ್ತದೆ. ಆದರೆ, ಈ ವರ್ಷ ಮಳೆಗಾಲದಲ್ಲೂ ಅಷ್ಟೇ ಪ್ರಮಾಣದಲ್ಲಿ ಮಾರಾಟಗುತ್ತಿದೆ.
- ಎಫ್. ಎಚ್.ಛಲವಾದಿ, ಜಂಟಿ ಆಯುಕ್ತರು, ಬೆಳಗಾವಿ ವಿಭಾಗ