ಕೊಳವಿ ಗ್ರಾಮದಲ್ಲಿ ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಹೋರಿ ಮತ್ತು ಎತ್ತುಗಳ ಪ್ರದರ್ಶನಕ್ಕೆ ಗಣ್ಯರು ಚಾಲನೆ ನೀಡಿದರು. ಟಿ.ಆರ್.ಕಾಗಲ್, ಮಡ್ಡೆಪ್ಪ ತೋಳಿನವರ, ಸಂಗಯ್ಯ ಸ್ವಾಮೀಜಿ ಇತರರಿದ್ದರು.
ಗೋಕಾಕ ತಾಲೂಕಿನ ಕೊಳವಿ ಗ್ರಾಮದ ಗೂಳಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬಸವ ಜಯಂತಿ ಅಂಗವಾಗಿ ಗೂಳಿ ಬಸವೇಶ್ವರ ಯುವಕ ಸಂಘದ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹೋರಿ, ಎತ್ತುಗಳ ಪ್ರದರ್ಶನ ಹಾಗೂ ಒಂದು ಎಕರೆ ಜಮೀನಿನಲ್ಲಿ ಅತಿ ಹೆಚ್ಚು ಕಬ್ಬು ಬೆಳೆದ ರೈತರಿಗೆ ‘ಕಾಯಕ ಬಸವ’ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ರೈತರು ಎತ್ತುಗಳನ್ನು ಅಲಂಕರಿಸಿ ಆರೋಗ್ಯ ಮತ್ತು ತಳಿ ಪ್ರದರ್ಶಿಸಲು ವೇದಿಕೆ ಕಲ್ಪಿಸಿದ ಬಸವೇಶ್ವರ ಯುವಕ ಸಂಘದ ಮಾದರಿಯಾಗಿದೆ. ಕಾಯಕವೇ ಕೈಲಾಸ ಎಂಬ ಬಸವಣ್ಣನವರ ಪ್ರತಿಪಾದನೆಯಂತೆ ಗಾಳಿ, ಮಳೆ ಹಾಗೂ ಚಳಿ ಲೆಕ್ಕಿಸದೆ ವರ್ಷಪೂರ್ತಿ ಪರಿಶ್ರಮದಿಂದ ದುಡಿಯುವ ರೈತರು ನಿಜವಾದ ಕಾಯಕಯೋಗಿ ಎಂದು ಸ್ಮರಿಸಿದರು.
ಜಿಪಂ ಮಾಜಿ ಸದಸ್ಯ ಮಡ್ಡೆಪ್ಪ ತೋಳಿನವರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಸಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಒಂದು ಎಕರೆ ಜಮೀನಿನಲ್ಲಿ ಹೆಚ್ಚು ಕಬ್ಬು ಬೆಳೆದ ಗೂಳಪ್ಪ ಕೊಳದೂರ, ಶಿವಲಿಂಗಪ್ಪ ಕೊತ್ತಲ ಹಾಗೂ ಮಾರುತಿ ಬಿರಾದಾರ ಅವರಿಗೆ ‘ಬಸವ ಕಾಯಕ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರೈತರಾದ ಗುರುಲಿಂಗ ಹಿರಟ್ಟಿ, ಶಿವಯ್ಯ ಮಠಪತಿ, ಸಿದ್ಧಲಿಂಗಪ್ಪ ಸಿಂಗಾಡಿ ಹಾಗೂ ಹೋರಿ ಸ್ಪರ್ಧೆ ವಿಜೇತರಿಗೆ ನಗದು ಬಹುಮಾನ ಮತ್ತು ಲಕ ನೀಡಲಾಯಿತು. ಗ್ರಾಮದಲ್ಲಿ ಎತ್ತುಗಳ ಮೆರವಣಿಗೆ ನಡೆಸಲಾಯಿತು. ಸಂಗಯ್ಯ ಸ್ವಾಮೀಜಿ, ಕಾಡಯ್ಯ ಮಠಪತಿ, ಬಸಯ್ಯ ಹುಲಕಂತಿ, ಶಂಕರಯ್ಯ ಮಠಪತಿ, ಎಂ.ಕೆ.ಪಾಟೀಲ, ಅಶೋಕ ಸಿಂಗಾಡಿ, ದೇವಾನಂದ ಕಂಬಾರ, ಉಮೇಶ ವನಕಿ, ಜಗದೀಶ ಅಂಗಡಿ ಇತರರಿದ್ದರು. ಆನಂದ ಹಟ್ಟಿಗೌಡರ ನಿರೂಪಿಸಿದರು.