ಐನಾಪುರ ಸಿದ್ಧೇಶ್ವರ ಜಾತ್ರಾ ಮಹೋತ್ಸದ ಅಂಗವಾಗಿ ಹಮ್ಮಿಕೊಂಡಿದ್ದ ಕುದುರೆ ಗಾಡಿ ಶರ್ಯತ್ತು.
- ರೈತ ಮುಖಂಡ ದಾದಾಗೌಡ ಪಾಟೀಲ ಮೆಚ್ಚುಗೆ
- ಶ್ವಾನ ಪ್ರದರ್ಶನ, ಕುದುರೆ ಶರ್ಯತ್ತು
ಐನಾಪುರ: ನಂಬಿಗಸ್ತ ಶ್ವಾನಕ್ಕಿರುವ ನಿಯತ್ತು ಮನುಷ್ಯನಲ್ಲಿ ಇಲ್ಲದಾಗಿದೆ. ಸೇನೆಯಲ್ಲಿಯೂ ಉತ್ತರ ಕರ್ನಾಟಕದ ಮುಧೋಳ ತಳಿ ನಾಯಿ ಬಳಸಲಾಗುತ್ತಿರುವುದು ಹೆಮ್ಮೆ ಎಂದು ರೈತ ಮುಖಂಡ ದಾದಾಗೌಡ ಪಾಟೀಲ ಹೇಳಿದರು.
ಪಟ್ಟಣದಲ್ಲಿ ಶ್ರೀ ಸಿದ್ಧೇಶ್ವರ ಜಾತ್ರಾ ಮಹೋತ್ಸದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಶ್ವಾನ ಪ್ರದರ್ಶನ ಸ್ಪರ್ಧೆ ಬಹುಮಾನ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಜೋಡು ಕುದುರೆ ಸೇರಿ ಇತರ ಶರ್ಯತ್ತು ಏರ್ಪಡಿಸಿರುವುದು ಶ್ಲಾಘನೀಯ. ಮನಂಜನೆ ಜತೆಗೆ ಮೂಕ ಪ್ರಾಣಿಗಳ ಮೇಲೆ ಐನಾಪುರ ಜನತೆ ತೋರುವ ಪ್ರೀತಿ ಅದ್ವಿತೀಯ ಎಂದರು.
ಮಹಾರಾಷ್ಟ್ರ, ಕರ್ನಾಟಕದ ವಿವಿಧ ಭಾಗಗಳಿಂದ 15ಕ್ಕೂ ಹೆಚ್ಚು ಜೋಡು ಕುದುರೆಗಳು ಹಾಗೂ ವಿವಿಧ ತಳಿಯ 100ಕ್ಕೂ ಹೆಚ್ಚು ಶ್ವಾನಗಳು ಶರ್ಯತ್ತಿನಲ್ಲಿ ಭಾಗವಹಿಸಿದ್ದವು.
ಶ್ವಾನಪ್ರದರ್ಶನದಲ್ಲಿ ವಿಶ್ವಾಸ ನಡೋಣಿ ಪ್ರಥಮ, ಮಹೇಶ ದ್ವಿತೀಯ, ಬಸವರಾಜ ಬಡಿಗೇರ ತೃತೀಯ, ಬಸು ಕಮಸಿ ಚತುರ್ಥ ಬಹುಮಾನ, ಜೋಡು ಕುದುರೆ ಶರ್ಯತ್ತಿನಲ್ಲಿ ಚಂದೂರಿನ ಸಚಿನ ಪಾಟೀಲ ಪ್ರಥಮ, ಜಮಖಂಡಿಯ ಅನಿರುದ್ಧ ದ್ವಿತೀಯ, ಐನಾಪುರದ ಭೂಷಣ ಪಾಟೀಲ ತೃತೀಯ, ಕಾಗಲದ ಅಕ್ಷಯ ಮಾಳಂಗೆ ಚತುರ್ಥ ಬಹುಮಾನ ಪಡೆದುಕೊಂಡರು. ಜಾತ್ರಾ ಕಮಿಟಿ ಅಧ್ಯಕ್ಷ ದಾದಾಸಾಹೇಬ ಜಂತೆನ್ನವರ ಮಾತನಾಡಿದರು.
ಜಿಪಂ ಮಾಜಿ ಸದಸ್ಯೆ ಪ್ರೇಮಲತಾ ರಡ್ಡಿ, ಪಿಕೆಪಿಎಸ್ ಅಧ್ಯಕ್ಷ ತಮ್ಮಣ್ಣ ಪಾರಶೆಟ್ಟಿ, ಶಾಂತಿಸಾಗರ ಆಂಗ್ಲ ಮಾಧ್ಯಮ ಶಾಲೆ ಅಧ್ಯಕ್ಷ ಅರುಣ ಗಾಣಿಗೇರ, ವಕೀಲ ಸಂಜಯ ಕುಚನೂರೆ, ರಾಜೇಂದ್ರ ಪೋತದಾರ, ಅಣ್ಣಾಸಾಹೇಬ ಡೂಗನವರ, ಕುಮಾರ ಅಪರಾಜ, ಉದಯ ನಿಡಗುಂದಿ, ಸುದರ್ಶನ ಜಂತೆನ್ನವರ, ಅರವಿಂದ ಕಾರಚಿ, ರಾಜು ಖವಟಕೊಪ್ಪ, ರಾಘವೇಂದ್ರ ಕಾಂಬಳೆ, ರಮೇಶ ದೊಡಮನಿ, ಉಮೇಶ ಭಂಡಾರೆ, ರಾಕೇಶ ಬಣಜವಾಡ, ಮಲ್ಲೇಶ ರಡ್ಡಿ, ಸುರೇಶ ಶೇಡಶಾಲ ಇತರರು ಇದ್ದರು.