ಹುಟ್ಟೂರಾದ ನಾಗನೂರ ಪಿ.ಕೆ.ಗ್ರಾಮಕ್ಕೆ ಸಚಿವ ಲಕ್ಷ್ಮಣ ಸವದಿ ಆಗಮಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸನ್ಮಾನಿಸಿದರು. ಶಿವು ಗುಡ್ಡಾಪುರ, ಗಂಗಪ್ಪ ಬಿಳ್ಳೂರ, ರಮೇಶ ಸವದಿ, ಬಸಪ್ಪ ಚೌಗಲಾ ಇತರರಿದ್ದರು.
- ಸಚಿವ ಲಕ್ಷ್ಮಣ ಹೇಳಿಕೆ
- ಹುಟ್ಟೂರು ನಾಗನೂರ ಪಿ.ಕೆ. ಗ್ರಾಮಕ್ಕೆ ಭೇಟಿ
ರಾಜ್ಯದ ಪ್ರತಿಯೊಬ್ಬರೂ ನನ್ನನ್ನು ಗುರುತಿಸುವ ಕಾರ್ಯದಲ್ಲಿ ಕ್ಷೇತ್ರದ ಜನರ ಋಣ ಸಾಕಷ್ಟಿದೆ. ಅವರ ಆಶೀರ್ವಾದದಿಂದಾಗಿ ಉಪಮುಖ್ಯಮಂತ್ರಿಯಾಗುವ ಜತೆಗೆ ನಾಲ್ಕು ಬಾರಿ ಸಚಿವನಾಗಿದ್ದೇನೆ ಎಂದು ಸಚಿವ ಲಕ್ಷ್ಮಣ ಸವದಿ ಹೇಳಿದರು.
ನೂತನ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಹುಟ್ಟೂರಾದ ಅಥಣಿ ತಾಲೂಕಿನ ನಾಗನೂರ ಪಿ.ಕೆ. ಗ್ರಾಮಕ್ಕೆ ಭಾನುವಾರ ಭೇಟಿ ನೀಡಿ ಮಹಾಲಕ್ಷ್ಮಿ ದೇವಿ ದರ್ಶನ ಪಡೆದು ಮಾತನಾಡಿದರು.
ಸಹಕಾರ, ಕೃಷಿ, ಮಾರುಕಟ್ಟೆ, ಸಾರಿಗೆ ಸೇರಿದಂತೆ ವಿವಿಧ ಇಲಾಖೆಗಳನ್ನು ನಿಭಾಯಿಸಿದ್ದೇನೆ. ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಶ್ರಮ ವಹಿಸುತ್ತೇನೆ. ಅಧಿಕಾರಕ್ಕಿಂತ ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ದೊಡ್ಡದು. ನಿಮ್ಮ ಅಭಿಮಾನ, ಹರ್ಷೋದ್ಗಾರ, ಶಿಳ್ಳೆ, ಪಟಾಕಿಗೆ ಪುಳಕಿತನಾಗಿದ್ದೇನೆ ಎಂದರು.
ಯುವಮುಖಂಡ ಶಿವು ಗುಡ್ಡಾಪುರ ಮಾತನಾಡಿ, ಜನಸೇವೆಯೇ ಜನಾರ್ದನ ಸೇವೆ ಎಂಬ ತತ್ತ್ವದೊಂದಿಗೆ ಜನರ ಸಮಸ್ಯೆಗಳಿಗೆ ಮುಂಚೂಣಿಯಲ್ಲಿ ನಿಂತಿರುವ ಲಕ್ಷ್ಮಣ ಸವದಿ ಅಂತಹ ಜನಪ್ರತಿನಿಧಿಯನ್ನು ಪಡೆದ ನಾವೆಲ್ಲರೂ ಅದೃಷ್ಟವಂತರು. ಅವರಿಗೆ ಸಚಿವ ಸ್ಥಾನ ದೊರೆತಿರುವುದು ನಮ್ಮೆಲ್ಲರಿಗೂ ಸಂತಸದ ವಿಷಯ. ರಾಜ್ಯದ ಅಭಿವೃದ್ಧಿಗೆ ಮತ್ತಷ್ಟು ವೇಗ ದೊರೆಯಲಿ. ರೈತರು, ಕಾರ್ಮಿಕರು, ಯುವಜನರು, ಮಹಿಳೆಯರು ಹಾಗೂ ಬಡ-ಮಧ್ಯಮ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವಂತಹ ಜನಪರ ಯೋಜನೆಗಳು ರೂಪಗೊಳ್ಳಲಿ ಎಂದರು.
ಮುಖಂಡರಾದ ಗಂಗಪ್ಪ ಬಿಳ್ಳೂರ, ರಮೇಶ ಸವದಿ, ಬಸಪ್ಪ ಚೌಗಲಾ, ಭೀಮಪ್ಪ ಹಂಚಿನಾಳ, ಚಿದಾನಂದ ಸವದಿ, ನೇಮಿನಾಥ ಯಕ್ಸಂಬಿ, ರಾಮು ಗೂಗವಾಡ, ರಾವಸಾಬ ಐಗಳಿ, ಸಂತೋಷ ಮಲಕಾರ, ಲಖನ ಸಲಗರ, ಶಿವಗೌಡ ಬಿಳ್ಳೂರ, ಬಸವರಾಜ ತೇಲಿ, ಅಪ್ಪಾಸಾಬ ಸಾವಡಕರ ಇತರರಿದ್ದರು.