ಮಲಗೌಡ ಪಾಟೀಲ ಕಾಲೇಜಿನಲ್ಲಿ ಶಿರಸಂಗಿ ಲಿಂಗರಾಜರ ಜಯಂತಿ ಆಚರಿಸಲಾಯಿತು. ಪಿ.ಪಿ.ಪವಾರ, ಇತರರಿದ್ದರು.
ರಾಯಬಾಗ: ತ್ಯಾಗವೀರ ಶಿರಸಂಗಿ ಲಿಂಗರಾಜರ ಬದುಕು ವಿದ್ಯಾರ್ಥಿಗಳಿಗೆ ದಾರಿದೀಪವಾಗಬೇಕು ಎಂದು ಉಪನ್ಯಾಸಕ ಪಿ.ಪಿ.ಪವಾರ ಹೇಳಿದರು. ಪಟ್ಟಣದ ಸ್ಥಳೀಯ ಕೆಎಲ್‌ಇ ಸಂಸ್ಥೆಯ ಮಲಗೌಡ ಪಾಟೀಲ ಪದವಿ ಹಾಗೂ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತ್ಯಾಗವೀರ ಶಿರಸಂಗಿ ಲಿಂಗರಾಜರ 165ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದ ಏಳಿಗೆಗಾಗಿ ಶ್ರಮಿಸಿದ ಲಿಂಗರಾಜರ ತ್ಯಾಗ, ನಿಸ್ವಾರ್ಥ ಸೇವೆಗಳನ್ನು ಸ್ಮರಿಸಬೇಕು ಎಂದರು. ಪ್ರಾಚಾರ್ಯ ಡಾ.ಆರ್.ಕೆ.ಪಾಟೀಲ ಮಾತನಾಡಿದರು.