ಮುರಗೋಡ ಗ್ರಾಮದ ದುರದುಂಡೀಶ್ವರ ಮಠದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತ ಡಾ.ಪ್ರಭಾಕರ ಕೋರೆ ಅವರಿಗೆ ನೀಲಕಂಠ ಸ್ವಾಮೀಜಿ ‘ಮುರಗೋಡ ಮುಕುಟ’ ಪ್ರಶಸ್ತಿ ಪ್ರದಾನ ಮಾಡಿದರು. ಶಂಕರ ದೇವರು, ವಿಜಯ ಮೆಟಗುಡ್ಡ, ವೀರಭದ್ರಪ್ಪ ದೇಸಾಯಿ, ಅಶೋಕ ಶೆಟ್ಟರ, ಮಹಾಂತೇಶ ಅವರಾದಿ ಇತರರಿದ್ದರು.
ಮುರಗೋಡ: ಇಂದಿನ ಕಂಪ್ಯೂಟರ್ ಯುಗದಲ್ಲೂ ಸಂಸ್ಕಾರದ ಬೆಳಕು ಚೆಲ್ಲುತ್ತಿರುವ ಮಹಾನ್ ಕೀರ್ತಿ ಮುರಗೋಡದ ಮಹಾಂತ ಅಜ್ಜನವರ ಮಠಕ್ಕೆ ಸಲ್ಲುತ್ತದೆ ಎಂದು ಕೆಎಲ್‌ಇ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷ, ಪದ್ಮಶ್ರೀ ಪುರಸ್ಕೃತ ಡಾ.ಪ್ರಭಾಕರ ಕೋರೆ ಅಭಿಮತ ವ್ಯಕ್ತಪಡಿಸಿದರು.
ಗ್ರಾಮದ ದುರದುಂಡೀಶ್ವರ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಲಿಂ.ಮಹಾಂತ ಶಿವಯೋಗಿಗಳ 54ನೇ ಪುಣ್ಯಸ್ಮರಣೋತ್ಸವ, ತ್ರಿಶುಂಗಪುರ ಉತ್ಸವ ಹಾಗೂ ಜಾತ್ರಾ ಮಹೋತ್ಸವ ಸಮಾರಂಭದಲ್ಲಿ ಪ್ರಸಕ್ತ ಸಾಲಿನ ‘ಮುರಗೋಡ ಮುಕುಟ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಮಹಾಂತಜ್ಜನ ಕೃಪಾಶೀರ್ವಾದಿಂದ ಕೆಎಲ್‌ಇ ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ. ಮಠದ ಸಂಸ್ಕಾರ ಇಂದಿನ ಸಮಾಜಕ್ಕೆ ಹೆಚ್ಚಿನ ಲ ನೀಡಲಿ ಎಂದರು.
ಸಾನ್ನಿಧ್ಯ ವಹಿಸಿದ್ದ ಶ್ರೀಮಠದ ನೀಲಕಂಠ ಸ್ವಾಮೀಜಿ ಮಾತನಾಡಿ, ಶಿಕ್ಷಣ, ಆರೋಗ್ಯ ಹಾಗೂ ಸಮಾಜ ಸೇವೆ ಪರಿಗಣಿಸಿ ಡಾ.ಪ್ರಭಾಕರ ಕೋರೆ ಅವರಿಗೆ ‘ಮುರಗೋಡ ಮುಕುಟ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಡಾ.ಪ್ರಭಾಕರ ಕೋರೆ ಶಿಕ್ಷಣ ಸಂಸ್ಥೆ ಹಾಗೂ ಆಸ್ಪತ್ರೆ ಲಕ್ಷಾಂತರ ಜನರಿಗೆ ಉದ್ಯೋಗ ನೀಡುವ ಮೂಲಕ ಲಿಂಗಾಯತ ಸಮುದಾಯದ ಪ್ರಗತಿಗೆ ಶ್ರಮಿಸುತ್ತಿರುವ ಕಾರ್ಯ ಮಾದರಿಯಾಗಿದೆ. ಡಾ.ಪ್ರಭಾಕರ ಕೋರೆ ಎಲ್ಲರಿಗೂ ಸ್ಫೂರ್ತಿ ಎಂದರು.
ಬೈಲವಾಡದ ಶಂಕರ ದೇವರು, ಕೆಎಲ್‌ಇ ಸಂಸ್ಥೆ ನಿರ್ದೇಶಕ ವಿಜಯ ಮೆಟಗುಡ್ಡ, ಧರ್ಮದರ್ಶಿ ವೀರಭದ್ರಪ್ಪ ದೇಸಾಯಿ, ಅಶೋಕ ಶೆಟ್ಟರ, ಮಹಾಂತೇಶ ಅವರಾದಿ, ಶಿವನಗೌಡ ಪಾಟೀಲ, ಅಮಿತ ದೇಸಾಯಿ, ಪ್ರಾಚಾರ್ಯ ರಮೇಶ ಭಜಂತ್ರಿ, ಮಹಾಂತೇಶ ಗೌಡತಿ, ಬಸವರಾಜ ಬ್ಯಾಳಿ, ಸಂತೋಷ ಹಿರೇಮಠ, ವಿಜಯ ಸಾಣಿಕೂಪ್ಪ, ಸುರೇಶ ಮ್ಯಾಕಲ ಇತರರಿದ್ದರು.