ಚನ್ನಮ್ಮನ ಕಿತ್ತೂರಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಸಕ ಬಾಬಾಸಾಹೇಬ ಪಾಟೀಲ, ಸಂಸ್ಥೆ ಚೇರ್ಮನ್ ಡಾ.ವೀರಭದ್ರಪ್ಪ ಗಡಗಿ, ಡಾ.ಸಂಜಯ ಸಿದ್ದಣ್ಣವರ, ಜೈಸಿದ್ಧರಾಮ ಮಾರಿಹಾಳ, ಡಾ.ಪ್ರಭಾಕರ ಪಾಟೀಲ ಇತರರಿದ್ದರು. 
ಬೆಳಗಾವಿ

ಜೀವ ಉಳಿಸುವ ವೈದ್ಯರ ಕಾರ್ಯ ಶ್ಲಾಘನೀಯ

ಪಟ್ಟಣದ ಚನ್ನಬಸವ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀಮತಿ ಶಕುಂತಲಾ ಗಡಗಿ ಇನ್ಸಿಟ್ಯೂಟ್ ನರ್ಸಿಂಗ್ ಸೈನ್ಸ್ ಕಾಲೇಜಿನ ಪ್ರಥಮ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಜಾತಿ, ಭೇದ ಬಿಟ್ಟು ಸಮಾಜದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ವೈದ್ಯರ ಪಾತ್ರ ಪ್ರಮುಖವಾಗಿದೆ. ಡಾ.ವೀರಭದ್ರಪ್ಪ ಗಡಗಿ ಅವರ ಶ್ರಮದಿಂದ ಈ ಭಾಗದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಲಭಿಸುತ್ತಿರುವುದು ನಮ್ಮೆಲ್ಲರ ಭಾಗ್ಯ ಎಂದರು.
ಶಕುಂತಲಾ ಗಡಗಿ ಸಂಸ್ಥೆ ಚೇರ್ಮನ್ ಡಾ.ವೀರಭದ್ರಪ್ಪ ಗಡಿಗಿ ಮಾತನಾಡಿ, ನನ್ನ ಬಹುದಿನಗಳ ಕನಸಾಗಿದ್ದ ಬಡ ಮಕ್ಕಳಿಗೆ ವೈದ್ಯಕೀಯ ಶಿಕ್ಷಣ ನೀಡುವುದು ಎಲ್ಲರ ಸಹಕಾರದಿಂದ ಸಾಕಾರಗೊಳ್ಳುತ್ತಿದೆ ಎಂದರು.