ಅಥಣಿಯ ಕೆಎಂಸಿ ಆಸ್ಪತ್ರೆ ಕಟ್ಟಡ ಉದ್ಘಾಟನೆ ಸಮಾರಂಭಕ್ಕೆ ಯುವ ಮುಖಂಡ ಚಿದಾನಂದ ಸವದಿ, ಸಿದ್ಧಲಿಂಗ ಸ್ವಾಮೀಜಿ, ಮರುಳಸಿದ್ಧ ಸ್ವಾಮೀಜಿ ಚಾಲನೆ ನೀಡಿದರು. ಸೋಮಶೇಖರ ಪಾಟೀಲ, ವಿಜಯ ಕುರಿಯನ್ನವರ ಇತರರಿದ್ದರು. 
ಬೆಳಗಾವಿ

ಜೀವ ಉಳಿಸುವ ವೈದ್ಯರ ಸೇವೆಗೆ ಬೆಲೆ ಕಟ್ಟಲಾಗದು

ಪ್ರಮುಖ ಮುಖ್ಯಾಂಶಗಳು

  • ಸ್ತ್ರೀರೋಗ ತಜ್ಞ ಡಾ.ಸೋಮಶೇಖರ ಪಾಟೀಲ ಅಭಿಮತ
  • ಕೆಎಂಸಿ ಆಸ್ಪತ್ರೆ ಕಟ್ಟಡ ಉದ್ಘಾಟನೆ ಸಮಾರಂಭ
ಅಥಣಿ: ಆರೋಗ್ಯ ಕಾಪಾಡುವಲ್ಲಿ ವೈದ್ಯರ ಪಾತ್ರ ಮಹತ್ವದ್ದಾಗಿದೆ. ವೈದ್ಯ ವೃತ್ತಿ ಉದ್ಯೋಗವಲ್ಲ, ಅದೊಂದು ಸಮಾಜ ಸೇವೆ ಎಂದು ಖ್ಯಾತ ಸ್ತ್ರೀರೋಗ ತಜ್ಞ ಡಾ.ಸೋಮಶೇಖರ ಪಾಟೀಲ ಹೇಳಿದರು.
ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೆಎಂಸಿ ಆಸ್ಪತ್ರೆ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ವೈದ್ಯರ ನಿಸ್ವಾರ್ಥ ಸೇವೆಗೆ ಬೆಲೆ ಕಟ್ಟಲಾಗದು. ರೋಗಿಗಳ ಸೇವೆಯಲ್ಲಿ ನಿರಂತರವಾಗಿ ತೊಡಗಿರುವ ವೈದ್ಯರ ಕಾರ್ಯ ಮಾದರಿ. ಡಾ.ಸಂಜಯ ಕುರೆನ್ನವರ ವೈದ್ಯಕೀಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಅಪಾರ ಎಂದರು.
ಆಸ್ಪತ್ರೆ ಕಟ್ಟದ ಉದ್ಘಾಟಿಸಿದ ಯುವ ಮುಖಂಡ ಚಿದಾನಂದ ಸವದಿ ಮಾತನಾಡಿ, ವೈದ್ಯರಿಲ್ಲದ ಸಮಾಜವನ್ನು ನಾವು ಕಲ್ಪಿಸಿಕೊಳ್ಳುವುದು ಅಸಾಧ್ಯ. ಶಾಸಕ ಲಕ್ಷ್ಮಣ ಸವದಿ ಹೆಸರಿನಲ್ಲಿ ಫೌಂಡೇಶನ್ ಆರಂಭಿಸಿ ಬಡ ರೋಗಿಗಳಿಗೆ ಆರೋಗ್ಯ ಸೇವೆ ಉಚಿತವಾಗಿ ನೀಡುತ್ತಿದ್ದೇವೆ. ಆಸ್ಪತ್ರೆಯಿಂದ ಗುಣಮಟ್ಟದ ಸೇವೆ ದೊರಕಲಿ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ನದಿ ಇಂಗಳಗಾವದ ಸಿದ್ಧಲಿಂಗ ಸ್ವಾಮೀಜಿ, ಶೆಟ್ಟರ ಮಠದ ಮರುಳಸಿದ್ಧ ಸ್ವಾಮೀಜಿ ಆಶೀರ್ವಚನ ನೀಡಿದರು. ರಾಜಶೇಖರ ಟೋಪಗಿ, ಕಲೀಲ ಜಾಲಿಹಾಳ ಅವರನ್ನು ಸನ್ಮಾನಿಸಲಾಯಿತು.
ಕೃಷ್ಣ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ, ನಿರ್ದೇಶಕ ಜಿ.ಎಂ.ತೇವರಮನಿ, ಶಿವರುದ್ರ ಗೂಳಪ್ಪನವರ, ಮುರಿಗೆಪ್ಪ ಕುರೆನ್ನವರ, ಶೋಭಾ ಕುರೆನ್ನವರ, ಡಾ.ರಶ್ಮಿ ಕುರೆನ್ನವರ, ಡಾ.ಪ್ರೀತಿ ಕುರೆನ್ನವರ, ಎಸ್.ಆರ್.ಮಾಳಿ, ಡಾ.ಸಂಜಯ ಕುರೆನ್ನವರ, ವಿಜಯ ಹುದ್ದಾರ, ಡಾ.ವಿಜಯ ಕುರೆನ್ನವರ ಇತರರಿದ್ದರು.