ಬೆಟಗೇರಿಯಲ್ಲಿ ಏರ್ಪಡಿಸಿದ್ದ ಪ್ರವಚನದಲ್ಲಿ ಅಭಿನವ ಬೂದೀಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು.  
ಬೆಳಗಾವಿ

ಸತ್ಸಂಗದ ದಾರಿ ತೋರುವವನೇ ಗುರು

ಬೆಟಗೇರಿ: ಮನುಷ್ಯ ಜನ್ಮ ಶ್ರೇಷ್ಠವಾಗಿದೆ. ಒಳ್ಳೆಯ ಕಾಯಕ ಮಾಡಿ, ಭಗವಂತನ ನಾಮಸ್ಮರಣೆ ಮಾಡಿದರೆ ಅದೇ ಸತ್ಸಂಗ. ಎಲ್ಲವನ್ನೂ ಕೊಟ್ಟ ಭಗವಂತನನ್ನು ಎಂದಿಗೂ ಮರೆಯಬಾರದು ಎಂದು ಹೊಸಳ್ಳಿ ಅಭಿನವ ಬೂದೀಶ್ವರ ಸ್ವಾಮೀಜಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಬಸವ ಜಯಂತಿ ಹಾಗೂ ಹೊಸಳ್ಳಿ ಮಹಾತಪಸ್ವಿ ಜಗದ್ಗುರು ಬೂದೀಶ್ವರ ಮಹಾಶಿವಯೋಗಿಗಳ ಶಿಲಾ ಮಂಟಪ ಲೋಕಾರ್ಪಣೆ ಅಂಗವಾಗಿ ಏರ್ಪಡಿಸಿದ್ದ ಪ್ರವಚನದಲ್ಲಿ ಆಶೀರ್ವಚನ ನೀಡಿದ ಅವರು, ಸದ್ಗುರು ಯಾವಾಗಲೂ ದೊಡ್ಡವನು. ಗುರು ಸತ್ಸಂಗದ ದಾರಿ ತೋರಿಸುತ್ತಾನೆ ಎಂದರು.
ಭಾನುವಾರ ಅಭಿನವ ಬೂದೀಶ್ವರ ಸ್ವಾಮೀಜಿ ಮೆರವಣಿಗೆ ಜರುಗಿತು. ಏ.30ರಂದು ಪ್ರವಚನ ಮಂಗಲಗೊಳ್ಳಲಿದ್ದು, ಬೆಳಗ್ಗೆ 10ಕ್ಕೆ ಕೊಪ್ಪಳದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸ್ಥಳೀಯ ವಿವಿಡಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಪ್ರವಚನ ಜರುಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಬಸವಂತ ಕೋಣಿ, ಈಶ್ವರ ಬಳಿಗಾರ, ಶ್ರೀಧರ ದೇಯಣ್ಣವರ, ಬಸವರಾಜ ಪಣದಿ, ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ, ಎಂ.ಐ.ನೀಲಣ್ಣವರ, ದುಂಡಪ್ಪ ಮಾಳೇದ, ಮಲ್ಲಪ್ಪ ಪಣದಿ, ಬಾಳಪ್ಪ ಕನೋಜಿ, ನಿಂಗಪ್ಪ ಕಂಬಿ, ದುಂಡಪ್ಪ ಕಂಬಿ ಇತರರು ಇದ್ದರು.