ಬೈಲಹೊಂಗಲದಲ್ಲಿ ಹಳೇ ಹನುಮಂತ ದೇವರ ರಥೋತ್ಸವ ಸಂಭ್ರಮದಿಂದ ಜರುಗಿತು.
ಬೈಲಹೊಂಗಲ: ಇತಿಹಾಸ ಪ್ರಸಿದ್ಧ ಹಳೇ ಹನುಮಂತ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು. ರಥಕ್ಕೆ ಸಂಜು ಶಾಸೀ ಪತ್ರಿಮಠ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಬಳಿಕ ಭಕ್ತರು ಜೈ ಹನುಮಾನ್ ಘೋಷಣೆಗಳ ನಡುವೆ ರಥ ಎಳೆದು ಸಂಭ್ರಮಿಸಿದರು. ಭಕ್ತರು ಹೂವು, ಬಾಳೆಹಣ್ಣು ಹಾಗೂ ಕಾರಿಕ್ ಅರ್ಪಿಸಿ ಭಕ್ತಿ ಸಮರ್ಪಿಸಿದರು.
ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಗ್ಗೆ ಹನುಮಂತ ದೇವರಿಗೆ ರುದ್ರಾಭಿಷೇಕ, ವಿಶೇಷ ಪೂಜೆ ನೆರವೇರಿದವು. ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ಹನುಮಂತ ದೇವರ ದರ್ಶನ ಪಡೆದರು.
ದೇವಸ್ಥಾನವನ್ನು ವಿದ್ಯುತ್ ದೀಪ, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಮುಖಂಡರಾದ ಮಲ್ಲಿಕಾರ್ಜುನ ಬೋಳನ್ನವರ, ಮಹಾಬಳೇಶ್ವರ ಬೋಳನ್ನವರ, ವಿನಯ ಬೋಳನ್ನವರ, ವಿಜಯ ಬೋಳನ್ನವರ, ಶ್ರೀಶೈಲ ಗೀರನವರ, ವಿಠ್ಠಲ ಕಡಕೋಳ, ಅನಿಲ ಬೋಳನ್ನವರ, ಮಲ್ಲಿಕಾರ್ಜುನ ಕಮತಗಿ, ಗುಂಡು ಪೂಜೇರ, ದೇವೇಂದ್ರ ಪೂಜೇರಿ, ಕಿರಣ ಬಡಿಗೇರ, ಆನಂದ ಪೂಜೇರ ಇತರರಿದ್ದರು.