ಹಂಚಿನಾಳ ಕೆ ಕೆ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಎಸ್‌ಸಿಪಿ, ಟಿಎಸ್‌ಪಿ ಅನುದಾನದಲ್ಲಿ 50 ಲಕ್ಷ ರೂ. ಮೊತ್ತದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ದುರ್ಯೋಧನ ಐಹೊಳೆ ಭೂಮಿಪೂಜೆ ನೆರವೇರಿಸಿದರು.
ಕಬ್ಬೂರ: ರಾಯಬಾಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಭೆಂಡವಾಡ ಹಾಗೂ ಹನುಮಾನ ಏತ ನೀರಾವರಿ ಯೋಜನೆಗೆ ಮುಂಬರುವ ಆಯ-ವ್ಯಯದಲ್ಲಿ ಅನುದಾನ ಮೀಸಲಿಡುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗಿದೆ ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು.
ಪಟ್ಟಣದ ಹಂಚಿನಾಳ ಕೆ ಕೆ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಎಸ್‌ಸಿಪಿ, ಟಿಎಸ್‌ಪಿ ಅನುದಾನದಲ್ಲಿ 50 ಲಕ್ಷ ರೂ. ಮೊತ್ತದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಹಾಗೂ ನಾಗರಮುನ್ನೋಳಿ ಗ್ರಾಮದ ಸಿದ್ಧೇಶ್ವರ ಆವರಣದಲ್ಲಿ 24 ಲಕ್ಷ ರೂ. ಮೊತ್ತದಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಪೇವರ್ಸ್ ಅಳವಡಿಕೆ, ಥಳೋಬಾ ಗುಡಿ ಹತ್ತಿರ 8 ಲಕ್ಷ ರೂ. ಮೊತ್ತದಲ್ಲಿ ಸಭಾಭವನ ನಿರ್ಮಾಣ ಕಾಮಗಾರಿಗಳಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ರಾಯಬಾಗದ ಜನರು ನೀರಾವರಿಯಿಂದ ವಂಚಿತರಾಗಿದ್ದು, ನೀರಾವರಿ ಯೋಜನೆಗಳ ಮೂಲಕ ರೈತರ ಬಾಳು ಬಂಗಾರವಾಗಲಿದೆ. ಈಗಾಗಲೇ ಕರಗಾಂವ ಏತ ನೀರಾವರಿ ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು, ಭೆಂಡವಾಡ ಹಾಗೂ ಹನುಮಾನ ಏತ ನೀರಾವರಿ ಯೋಜನೆಗಳಿಗೂ ಸರ್ಕಾರ ಅನುದಾನ ಘೋಷಣೆ ಮಾಡಬೇಕು ಎಂದರು. ಹಿರಾ ಶುಗರ್ಸ್ ನಿರ್ದೇಶಕ ಸುರೇಶ ಬೆಲ್ಲದ, ಗ್ರಾಪಂ ಮಾಜಿ ಅಧ್ಯಕ್ಷ ಸಿದ್ದಪ್ಪ ಮರ‌್ಯಾಯಿ, ರಾಜು ಕುಂಬಾರ, ಎಂ.ಬಿ.ಆಲೂರೆ, ಅರುಣ ಮರ‌್ಯಾಯಿ, ರಮೇಶ ಕಾಳನ್ನವರ, ನಿಜಾಮ್ ಪೆಂದಾರಿ, ತಿಮ್ಮಣ್ಣ ಗಾಡಿವಡ್ಡರ, ಕಲ್ಲಪ್ಪ ಕಮತೆ