ನಿಪ್ಪಾಣಿಯ ವಿಎಸ್‌ಎಂ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್ ಸಹಯೋಗದಲ್ಲಿ ವಿಎಸ್‌ಎಂಎಸ್‌ಆರ್‌ಕೆಐಟಿಯಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ `ಯೂತ್ ಫೆಸ್ಟ್-೨೦೨೫' ಸಂಕಲ್ಪ ಕಾರ್ಯಕ್ರಮಕ್ಕೆ ಚಂದ್ರಕಾಂತ ಕೋಠಿವಾಲೆ ಚಾಲನೆ ನೀಡಿದರು. ಪ್ರಥಮೇಶ ಪಾಟೀಲ, ರಾಜು ಕಾಗೆ, ಸಚಿನ ಹಾಲಪ್ಪನವರ, ಸಮೀರ ಬಾಗೇವಾಡಿ, ಡಾ.ಸಿದ್ಧಗೌಡ ಪಾಟೀಲ ಇತರರು ಇದ್ದರು.
- ವಿಎಸ್‌ಎಂ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಅಭಿಪ್ರಾಯ
- ರಾಜ್ಯಮಟ್ಟದ ಯೂತ್ ಫೆಸ್ಟ್
ನಿಪ್ಪಾಣಿ: ದೇಶದ ಭವಿಷ್ಯ, ವಿಕಾಸ ಯುವಜನರ ಕೈಯಲ್ಲಿದೆ. ಅದಕ್ಕಾಗಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ವಿಎಸ್‌ಎಂ ಸಂಸ್ಥೆ ಕಲ್ಪಿಸುತ್ತಿದೆ ಎಂದು ಸ್ಥಳೀಯ ವಿದ್ಯಾ ಸಂವರ್ಧಕ ಮಂಡಳಿ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಹೇಳಿದರು.
ನಗರದ ವಿಎಸ್‌ಎಂ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್ಸ್ ಸಹಯೋಗದಲ್ಲಿ ವಿಎಸ್‌ಎಂ ಸೋಮಶೇಖರ ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯು ವಿದ್ಯಾರ್ಥಿಗಳಿಗಾಗಿ ಬುಧವಾರ ಆಯೋಜಿಸಿದ್ದ ರಾಜ್ಯಮಟ್ಟದ `ಯೂತ್ ಫೆಸ್ಟ್-೨೦೨೫' ಸಂಕಲ್ಪ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಮಾತನಾಡಿ, ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು. ಪರಿಶ್ರಮದಿಂದ ಗುರಿ ತಲುಪಲು ಪ್ರಯತ್ನಿಸಿದಾಗ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.
ವಾಗ್ಮಿ ಪ್ರಥಮೇಶ ಪಾಟೀಲ ಮಾತನಾಡಿ, ಇಂದಿನ ಯುವಜನರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಯುವಜನರು ವಿದ್ಯಾರ್ಥಿ ಜೀವನದ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ವಿಜ್ಞಾನ ವಸ್ತುಪ್ರದರ್ಶನ, ಸೃಜನಾತ್ಮಕ ಬರವಣಿಗೆ, ಫೇಸ್ ಪೇಂಟಿಂಗ್, ಕೊಲಾಜ್ ಮೇಕಿಂಗ್, ರಸಪ್ರಶ್ನೆ, ಪ್ರಬಂಧ ಬರವಣಿಗೆ, ರಂಗೋಲಿ, ಹಾಡು, ರೀಲ್ ಮಾಡುವುದು, ಭಾಷಣ, ಗುಂಪುನೃತ್ಯ ಮೊದಲಾದ ಸ್ಪರ್ಧೆಗಳು ಜರುಗಿದವು. ವಿವಿಧ ಶಾಲಾ ಕಾಲೇಜುಗಳ ೫೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕಾರ್ಯದರ್ಶಿ ಸಮೀರ ಬಾಗೇವಾಡಿ, ಸಂಚಾಲಕ ಸಂಜಯ ಮೊಳವಾಡೆ, ಸಚಿನ ಹಾಲಪ್ಪನವರ, ಶೇಖರ ಪಾಟೀಲ, ಬಿಆರ್‌ಸಿ ರಾಜು ಕಾಗೆ, ಬಿಇ ಪ್ರಾಚಾರ್ಯ ಡಾ.ಉಮೇಶ ಪಾಟೀಲ, ಡಿಪ್ಲೊಮಾ ಪ್ರಾಚಾರ್ಯ ಬಸವರಾಜ ಕರೋಶಿ, ವಿಎಸ್‌ಎಂ ಜಿ.ಐ.ಬಾಗೇವಾಡಿ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ನಿಂಗಪ್ಪ ಮಾದಣ್ಣವರ, ವಿಎಸ್‌ಎಂ ಪ್ರೌಢಶಾಲೆಗಳ ಮುಖ್ಯಶಿಕ್ಷಕ ಪ್ರಕಾಶ ಐನಾಪುರೆ, ಗಜಾನನ ಕಮತೆ ಇತರರಿದ್ದರು. ಉಜ್ವಲಕುಮಾರ ಗಚ್ಚಿ ಪ್ರಾರ್ಥಿಸಿದರು. ಸಿಇಒ ಡಾ.ಸಿದ್ಧಗೌಡ ಪಾಟೀಲ ಸ್ವಾಗತಿಸಿದರು. ವಿಎಸ್‌ಎಂ ಸ್ವತಂತ್ರ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಸಮ್ಮೇದ ಚೌಗುಲೆ ಪರಿಚಯಿಸಿದರು. ಪ್ರೊ.ಕವಿತಾ ವಸೇದಾರ ಮತ್ತು ಪ್ರೊ.ಮಾಧವಿ ಅವಳೇಕರ ನಿರೂಪಿಸಿದರು.
ಪ್ರೊ.ಕೈಲಾಸ ಪಠಾಡೆ ವಂದಿಸಿದರು.