ರಾಮದುರ್ಗ ಪಟ್ಟಣದ ವೆಂಕಟೇಶ್ವರ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ರಥೋತ್ಸವ ಸಂಭ್ರಮದಿಂದ ಜರುಗಿತು. 
ಬೆಳಗಾವಿ

ಸಂಭ್ರಮದ ವೆಂಕಟೇಶ್ವರ ರಥೋತ್ಸವ

ವೆಂಕಟೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡ ರಥೋತ್ಸವ ಹನುಮಾನ ದೇವಸ್ಥಾನದ ಎತ್ತರ ಪ್ರದೇಶದವರೆಗೆ ಸಂಚರಿಸಿತು. ಸ್ಥಳೀಯ ವಡ್ಡರ ಸಮುದಾಯದ ಜನತೆ ರಥವನ್ನು ಸನ್ನೆ ಕೋಲಿನಿಂದ ಹಿಮ್ಮುಖವಾಗಿ ತಿರುಗಿಸಿದ ಬಳಿಕ ರಥವು ವೆಂಕಟೇಶ್ವರ ದೇವಸ್ಥಾನದತ್ತ ಮರಳಿತು. ಭಕ್ತಾಧಿಗಳು ರಥಕ್ಕೆ ಉತ್ತತ್ತಿ, ಬಾಳೆಹಣ್ಣು, ತೆಂಗಿನ ಕಾಯಿ ಅರ್ಪಿಸಿ ಭಕ್ತಿ ಸಮರ್ಪಿಸಿದರು.
ಶಾಸಕ ಅಶೋಕ ಪಟ್ಟಣ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ದೇವಸ್ಥಾನದ ಅರ್ಚಕ ಲಲ್ಲುರಾಮದಾಸ, ಮಾಜಿ ಶಾಸಕ ಮಹಾದೇವಪ್ಪ ಯಾದವಾಡ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಮಲ್ಲಣ್ಣ ಯಾದವಾಡ,
ಜಾತ್ರಾ ಕಮಿಟಿ ಅಧ್ಯಕ್ಷ ಗಿರೀಶ ನೇಮಗೌಡ್ರ, ಉಪಾಧ್ಯಕ್ಷ ಶ್ರೀಕಾಂತ ಮಾಳದಕರ, ಕಾರ್ಯದರ್ಶಿ ಗಂಗಾಧರ ಭೋಸ್ಲೆ, ಗೋವಿಂದ ಮೋದಕ, ಆನಂದ ಕುಲಕರ್ಣಿ ಇತರರಿದ್ದರು.