ಹನುಮ ದೇವರ ಕಾರ್ತಿಕೋತ್ಸವ ವಿಜೃಂಭಣೆಯಿಂದ ಜರುಗಿತು 
ಬೆಳಗಾವಿ

ಸಂಭ್ರಮದ ಹನುಮ ದೇವರ ಕಾರ್ತಿಕೋತ್ಸವ

ನಾಗರಮುನ್ನೋಳಿ: ಗ್ರಾಮದ ಹನುಮಾನ ದೇವರ ಕಾರ್ತಿಕೋತ್ಸವ ಶನಿವಾರ ವಿಜೃಂಭಣೆಯಿಂದ ಜರುಗಿತು. ನೂರಾರು ಭಕ್ತರು ದೇವರಿಗೆ ಭಕ್ತಿಯಿಂದ ನೈವೇದ್ಯ ಕಾಯಿ, ಕರ್ಪೂರ ಸಮರ್ಪಿಸಿದರು.
ವೇ.ಮೂ ಸಂತೋಷ ಶಾಸ್ತ್ರಿಗಳಿಂದ ರುದ್ರಾಭಿಷೇಕ, ಬುತ್ತಿ, ಎಲಿ ಪೂಜೆ ಜರುಗಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಿದ್ಧೇಶ್ವರ, ಲಕ್ಷ್ಮೀ ದೇವರ ಮೆರವಣಿಗೆ ಮೂಲಕ ಹನುಮ ದೇವಸ್ಥಾನಕ್ಕೆ ಆಗಮಿಸಿ ಮಂಗಳಾರತಿ ನೆರವೇರಿಸಲಾಯಿತು. ದೀಪಾಲಂಕಾರ, ಕಾರ್ತಿಕೋತ್ಸವ ಜರುಗಿತು.
ಗ್ರಾಪಂ ಮಾಜಿ ಅಧ್ಯಕ್ಷ ಸಿದಪ್ಪ ಮರ‌್ಯಾಯಿ, ರಾಜು ಕುಂಬಾರ, ಡಾ.ಎಂ.ಬಿ.ಕುಂಬಾರ, ಎಂ.ಬಿ.ಆಲೂರೆ, ರಾಜು ಕುಂಬಾರ, ಮಾರುತಿ ಕಿಲೇದಾರ, ರಾಜು ಚೌಹಾಣ, ಶಿವಾನಂದ ಮರ‌್ಯಾಯಿ, ಮಾರುತಿ ಮರ‌್ಯಾಯಿ, ಬಾಬು ಕಾಳನ್ನವರ, ಲಾಡಜಿ ಮುಲ್ತಾನಿ, ಬಸವಣ್ಣಿ ಕುಂಬಾರ, ವಿನಾಯಕ ಕುಂಬಾರ, ಮಾರುತಿ ಹುಲ್ಲೋಳಿ, ಕೆಂಪಣ್ಣ ಯಾದಗೂಡೆ, ಅಶೋಕ ಈಟಿ, ಬಿ.ಎಸ್.ಯಾದಗೂಡೆ, ಅಣ್ಣಪ್ಪ ಇಟ್ನಾಳೆ, ಸಿದಗೌಡ ಪಾಟೀಲ, ರಾಜು ಪಾಟೀಲ , ಶಿವಪ್ಪ ಈಟಿ, ಬಾಬುರಾವ ಪಿಸಾಳೆ, ಶಿವಪ್ಪ ಶಿವೋಜಿ, ಸಿದ್ದಪ್ಪ ಹಿರೇಕುರುಬರ, ದೀಲಿಪ ಬಸನಾಯ್ಕ, ಅಬ್ದುಲಕರಿಂ ಬಾಗವಾನ್, ವಿಠ್ಠಲ ಇಟ್ನಾಳೆ ಇತರರಿದರು.