ಸುಕ್ಷೇತ್ರ ಇಂಚಲ ಶ್ರೀ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದ ಜಾತ್ರಾ ಮಹೋತ್ಸವ ನಿಮಿತ್ತ ಶಿವಯೋಗೀಶ್ವರರ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಲಕ್ಷಾಂತರ ಸದ್ಭಕ್ತರ ಜಯಘೋಷಗಳೊಂದಿಗೆ ಅದ್ದೂರಿಯಾಗಿ ಜರುಗಿದವು.
ಡಾ.ಶಿವಾನಂದ ಭಾರತಿ ಸ್ವಾಮೀಜಿ, ಹಂಪಿ ಹೇಮಕೂಟದ ವಿದ್ಯಾನಂದ ಭಾರತಿ ಸ್ವಾಮೀಜಿ, ದಾವಣಗೆರೆ ಶಿವಾನಂದ ಸ್ವಾಮೀಜಿ, ಬಳ್ಳಾರಿಯ ವಿದ್ಯಾನಂದ ಸ್ವಾಮೀಜಿ, ಮಲ್ಲಾಪೂರ ಚಿದಾನಂದ ಸ್ವಾಮೀಜಿ, ನೇಗಿನಹಾಳ ಅದ್ವೆತಾನಂದ, ಹಡಗಿನಹಾಳ ಮಲ್ಲೇಶ ಶರಣರು, ಇಂಚಲ ಶ್ರೀಮಠದ ಆಡಳಿತಾಧಿಕಾರಿ ಪೂರ್ಣಾನಂದ ಸ್ವಾಮೀಜಿ ಮಹಾರಥೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಭಕ್ತರು ಹೂ, ಹಣ್ಣು, ಕಾಯಿ, ಕಾರೀಕು, ನೈವೇದ್ಯ ಅರ್ಪಿಸಿದರು. ಎರಡೂ ರಥಗಳಲ್ಲಿ ಡಾ.ಶಿವಾನಂದ ಭಾರತಿ ಶ್ರೀಗಳು ಆಸೀನರಾಗಿ ಭಕ್ತರನ್ನು ಹರಿಸಿದರು. ರಥಗಳಲ್ಲಿ ಶಿವಯೋಗೀಶ್ವರರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು.ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು.