ತೆಲಸಂಗ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಲಕ್ಷ್ಮೀ ದೇವಿ (ತಳವಾರ ಪಟ್ಟಿ) ಜಾತ್ರಾ ಮಹೋತ್ಸವಕ್ಕೆ ಚಿದಾನಂದ ಸವದಿ ಚಾಲನೆ ನೀಡಿದರು. ಡಾ.ಬಿ.ಎಸ್.ಕಾಮನ, ಶ್ರೀಶೈಲ ಶೆಲ್ಲೆಪ್ಪಗೋಳ, ಆನಂದ ಥೈಕಾರ, ಯಲ್ಲಪ್ಪ ತಳವಾರ, ದಯಾನಂದ ದೇಸಂಗಿ, ಸಂಗಮೇಶ ಉಂಡೋಡಿ ಇತರರಿದ್ದರು.
ಜಾತ್ರೋತ್ಸವ ಸಾಮರಸ್ಯದ ಸಂಕೇತ
ತೆಲಸಂಗ: ಜಾತ್ರೆ ಎನ್ನುವುದು ಕೇವಲ ಆಚರಣೆಯಲ್ಲ, ದಣಿದ ಮನಸ್ಸು ಹಗುರಗೊಳಿಸುವ ಸಂಭ್ರಮದ ಹಬ್ಬ ಎಂದು ಕಾಂಗ್ರೆಸ್ ಯುವ ಮುಖಂಡ ಚಿದಾನಂದ ಸವದಿ ಹೇಳಿದರು. ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಲಕ್ಷ್ಮೀದೇವಿ (ತಳವಾರ ಪಟ್ಟಿ) ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿನಿತ್ಯ ಕಾಯಕದಲ್ಲಿ ತೊಡಗುವ ಜನರಿಗೆ ನೆಮ್ಮದಿ ಮತ್ತು ಮನರಂಜನೆ ನೀಡುವಲ್ಲಿ ಜಾತ್ರೆಗಳ ಪಾತ್ರ ಪ್ರಮುಖ. ದೇಶದ ಸಂಸ್ಕೃತಿ, ಪರಂಪರೆ ಉಳಿಸುವಲ್ಲಿ ಜಾತ್ರೆಗಳ ಕೊಡುಗೆ ಅಪಾರ ಎಂದರು. ಡಾ.ಬಿ.ಎಸ್.ಕಾಮನ, ಶ್ರೀಶೈಲ ಶೆಲ್ಲೆಪ್ಪಗೋಳ, ಆನಂದ ಥೈಕಾರ, ಯಲ್ಲಪ್ಪ ತಳವಾರ, ದಯಾನಂದ ದೇಸಂಗಿ, ಸಂಗಮೇಶ ಉಂಡೋಡಿ, ಸುನೀಲ ಉಂಡೋಡಿ, ಪ್ರಕಾಶ ಮೋರೆ, ಅಶೋಕ ಕಟವಾಣಿ, ಬಸವರಾಜ ಕಟವಾಣಿ, ಭೀಮಣ್ಣ ದೇಸಂಗಿ ಇತರರಿದ್ದರು.