ರಾಮದುರ್ಗದ ಸಿ.ಎಸ್.ಬೆಂಬಳಗಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರೊ.ಪ್ರಭಾ ಭಟ್ ಮಾತನಾಡಿದರು. ಎಸ್.ಎಸ್.ಸುಲ್ತಾನಪೂರ, ಎ.ಡಿ.ಕಾಮತ, ಎಸ್.ಎಸ್.ಕೊಡತೆ ಇತರರಿದ್ದರು.
ರಾಮದುರ್ಗ: ಹೆಣ್ಣು ಸಂಸಾರದ ಕಣ್ಣಾಗಿ ಜೀವನ ಪರ್ಯಂತ ಇತರರಿಗಾಗಿ ಬದುಕುವ ತ್ಯಾಗಮಯಿಯಾಗಿದ್ದಾಳೆ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಹಿಂದಿ ವಿಭಾಗದ ನಿವೃತ್ತ ಮುಖ್ಯಸ್ಥೆ ಪ್ರೊ.ಪ್ರಭಾ ಭಟ್ ಹೇಳಿದರು.
ಪಟ್ಟಣದ ಸಿ.ಎಸ್.ಬೆಂಬಳಗಿ ಮಹಾವಿದ್ಯಾಲಯದ ಐಕ್ಯೂಎಸಿ ಹಾಗೂ ವಿದ್ಯಾರ್ಥಿನಿಯರ ಸಂಘದ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಮಹಿಳೆ ಹಿಂದೆ, ಇಂದು ಮತ್ತು ನಾಳೆ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿ, ಇಡೀ ಕುಟುಂಬವೇ ಸರ್ವಸ್ವ ಎಂದು ಅರಿತು ಬದುಕುವ ಕರುಣಾಮಯಿ ಹೆಣ್ಣು ಎಂದು ಬಣ್ಣಿಸಿದರು.
ವಿದ್ಯಾ ಪ್ರಸಾರಕ ಸಮಿತಿ ಅಧ್ಯಕ್ಷ ಎಸ್.ಎಸ್.ಸುಲ್ತಾನಪೂರ ಮಾತನಾಡಿದರು. ಐಕ್ಯೂಎಸಿ ಸಂಯೋಜಕ ಎ.ಡಿ.ಕಾಮತ, ನಿವೃತ್ತ ಪ್ರಾಚಾರ್ಯ ಪ್ರೊ.ಎಸ್.ಎಸ್.ಕೊಡತೆ, ಮೇದಿನಿ ಬಡಿಗೇರ ಇತರರಿದ್ದರು. ಪ್ರಾಚಾರ್ಯ ಡಾ.ಪಿ.ಬಿ.ತೆಗ್ಗಿಹಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಡಾ.ವರ್ಷಾರಾಣಿ ಜಬಡೆ ಪರಿಚಯಿಸಿದರು. ವಿಜಯಲಕ್ಷ್ಮೀ ಮರಿಬಾಶೆಟ್ಟಿ, ಮಲ್ಲಮ್ಮ ತೋಳಗಟ್ಟಿ ನಿರೂಪಿಸಿದರು. ರಾಧಿಕಾ ಮನ್ನೂರ ವಂದಿಸಿದರು.