ಬೆಳಗಾವಿ ತಾಲೂಕಿನ ಕೊಂಡಸಕೊಪ್ಪ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಚನ್ನರಾಜ ಹಟ್ಟಿಹೊಳಿ ಉದ್ಘಾಟಿಸಿದರು. ಅರ್ಜುನಗೌಡ ಪಾಟೀಲ, ಮಡಿವಾಳ ಪಾಟೀಲ, ದೇವೇಂದ್ರ ದೇವತಕಟ್ಟಿ ಇತರರಿದ್ದರು.
ಬೆಳಗಾವಿ: ಮಹಾರಾಷ್ಟ್ರದ ಬಾರಾಮತಿಯಂತೆ ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಕನಸು ಸಾಕಾರವಾಗುತ್ತಿದೆ. ಇನ್ನಷ್ಟು ಅಭಿವೃದ್ಧಿಗೆ ನಿಮ್ಮೆಲ್ಲರ ಮಾರ್ಗದರ್ಶನ ಅಗತ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ತಾಲೂಕಿನ ಕೊಂಡಸಕೊಪ್ಪ ಗ್ರಾಮದಲ್ಲಿ ಭಾನುವಾರ ಛತ್ರಪತಿ ಶಿವಾಜಿ ಮಹಾರಾಜ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ 154 ಮಂದಿರಗಳ ಜೀರ್ಣೋದ್ಧಾರ ಹಾಗೂ ಎಲ್ಲ ಗ್ರಾಮಗಳಲ್ಲಿ ಮಹಾತ್ಮರ ಪುತ್ಥಳಿ ಸ್ಥಾಪನೆ ಮಾಡಲಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಧರ್ಮ ಮತ್ತು ಸಂಸ್ಕೃತಿ ಉಳಿಯಲು ಇಂತಹ ಮಹತ್ವದ ಕಾರ್ಯ ಅಗತ್ಯ. ಯುವಕರಲ್ಲಿ ಸಂಸ್ಕೃತಿ ಬಗ್ಗೆ ಗೌರವ ಬೆಳೆಸಬೇಕು. ಕಳೆದ ಎರಡೂವರೆ ವರ್ಷಗಳಲ್ಲಿ ಕ್ಷೇತ್ರದಲ್ಲಿ 1,500 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿ ನಡೆದಿವೆ ಎಂದರು.
ಅರ್ಜುನಗೌಡ ಪಾಟೀಲ, ಮಡಿವಾಳ ಪಾಟೀಲ, ದೇವೇಂದ್ರ ದೇವತಕಟ್ಟಿ, ಜ್ಯೋತಿಬಾ ಕುದುರೆಮನಿ, ಶಿವಾಜಿ ವಾಳಕಿ, ಲಕ್ಷ್ಮಣ ಪಾಟೀಲ, ಕೇಶವ ಚೌಗುಲೆ, ಜಯವಂತ ಪಾಟೀಲ, ಗಂಗಾರಾಮ ಪಾಟೀಲ, ಸುರೇಶ ಕರಗುಪ್ಪಿಕರ, ಬಾಳಕೃಷ್ಣ ಪಾಟೀಲ, ಗಂಗಾರಾಮ ಹುದಲಿ, ಕೃಷ್ಣಾ ಸನದಿ, ಕಲ್ಲಪ್ಪ ದೇಸಾಯಿ, ವಿಠ್ಠಲ ಸಾಂಬ್ರೇಕರ್, ದುರ್ಗಾ ತಿಪ್ಪವಗೋಳ, ಕಲ್ಲಪ್ಪ ಕುದುರೆಮನಿ ಇತರರಿದ್ದರು.
ಭೂಮಿಪೂಜೆ: ಬೆಳಗಾವಿ ತಾಲೂಕಿನ ಬಸ್ತವಾಡ ಗ್ರಾಮದಲ್ಲಿ 2.80 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿ ಹಾಗೂ 1.18 ಕೋಟಿ ರೂ. ವೆಚ್ಚದಲ್ಲಿ ಕಲ್ಮೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪೂಜೆ ಸಲ್ಲಿಸಿದರು. ನಂತರ ಮಾತನಾಡಿ, ಹಿಂದೂ ಧರ್ಮದ ಸಾರವೇ ಮಾನವೀಯತೆ ಎಂದು ಹೇಳಿದರು. ನಮ್ಮ ಧರ್ಮವನ್ನು ಅನುಸರಿಸುವ ಜತೆಗೆ ಇತರ ಧರ್ಮಗಳನ್ನೂ ಗೌರವಿಸುವುದು ನಮ್ಮ ಸಂಸ್ಕೃತಿ ಎಂದರು. ಚಂದ್ರಕಾಂತ ಪಾಟೀಲ, ಮನೋಹರ ಬಾಂಡಗಿ, ಶಿಲ್ಪಾ ಪಾಟೀಲ, ಮಾಣಿಕ ಸಂಕೇಶ್ವರಿ ಇತರರಿದ್ದರು.