ಯಕ್ಸಂಬಾ ಪಟ್ಟಣದ ಚನ್ನಬಸಪ್ಪ ಕರಾಳೆ ಪ್ರೌಢಶಾಲೆಯಲ್ಲಿ ಈಚೆಗೆ ೧೯೮೫ರ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಸ್ನೇಹ ಸಮ್ಮೀಲನ ಕಾರ್ಯಕ್ರಮ ಜರುಗಿತು. ವಿರೇಶ ಪಾಟೀಲ, ಚನ್ನಬಸಪ್ಪ ಕರಾಳೆ, ಸುರೇಶ ಮಿರ್ಜೆ, ಎಸ್.ಬಿ.ಪಾಟೀಲ, ಎ.ಕೆ.ಮೂಲಿಮನಿ, ಡಿ.ಕೆ.ಖೋತ, ಎಂ.ಎ.ಅಮೃತಸಮನ್ನವರ, ಎಸ್.ಆರ್.ಡೋಂಗ್ರೆ ಇತರರಿದ್ದರು.
- ಉಪನ್ಯಾಸಕ ಪ್ರೊ.ವೀರೇಶ ಪಾಟೀಲ ಅಭಿಮತ
- ಸ್ನೇಹ ಸಮ್ಮೀಲನ
ಚಿಕ್ಕೋಡಿ: ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ತಲುಪಿದಾಗ ಮಾತ್ರ ವಿದ್ಯೆ ಕಲಿಸಿದ ಗುರುಗಳಿಗೆ ಸಾರ್ಥಕಭಾವ ಮೂಡುತ್ತದೆ ಎಂದು ಉಪನ್ಯಾಸಕ ವೀರೇಶ ಪಾಟೀಲ ಅಭಿಪ್ರಾಯಪಟ್ಟರು.
ತಾಲೂಕಿನ ಯಕ್ಸಂಬಾ ಪಟ್ಟಣದ ಚನ್ನಬಸಪ್ಪ ಕರಾಳೆ ಪ್ರೌಢಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ೧೯೮೫ರ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಂದ ಗುರು ವಂದನೆ ಹಾಗೂ ಸ್ನೇಹ ಸಮ್ಮೀಲನ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದಲ್ಲಿ ಗುರುವಿಗೆ ಶ್ರೇಷ್ಠವಾದ ಸ್ಥಾನಮಾನವಿದೆ. ಗುರು-ಶಿಷ್ಯರ ನಡುವಿನ ಸಂಬಂಧಕ್ಕೆ ಪ್ರಾಮುಖ್ಯತೆಯಿದೆ. ಜೀವನದಲ್ಲಿ ಗುರುವಿನ ಋಣ ತೀರಿಸಲಾಗದು ಎಂದರು.
ಜನತಾ ಶಿಕ್ಷಣ ಅಧ್ಯಕ್ಷ ಚನ್ನಬಸಪ್ಪ ಕರಾಳೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸುರೇಶ ಮಿರ್ಜೆ, ಎಸ್.ಬಿ.ಪಾಟೀಲ, ಎ.ಕೆ.ಮೂಲಿಮನಿ, ಡಿ.ಕೆ.ಖೋತ, ಎಂ.ಎ.ಅಮೃತಸಮನ್ನವರ, ಎಸ್.ಆರ್.ಡೋಂಗ್ರೆ, ಎಸ್.ವಿ.ಪುಂಡೆ, ವಿ.ಜಿ.ಪಾಟೀಲ, ಎಂ.ವಿ.ಮುಕ್ರೆ, ಜಿ.ಎಸ್.ಹಜÁರೆ, ಬಿ.ಎಸ್.ಮಜಗಾಂವಿ, ಎ.ಕೆ.ರೆಂದಾಳೆ, ಮಧುಕರ ದೇವಋಷಿ, ಎಂ.ಎ.ಚೌಗಲಾ, ಬಿ.ಎ.ಮುತ್ನಾಳಿ, ತುಕಾರಾಮ ವರಾಳೆ, ರಾಜು ಚೌಗಲಾ, ಬಸವರಾಜ ಹಿರೇಮಠ, ಆರ್.ಎಸ್.ಸ್ವಾಮಿ, ಶ್ರೀಶೈಲ ಉಧೋಶಿ, ಬಿ.ಜಿ.ಹಿರೇಮಠ, ಸುರೇಶ ಖೋತ, ಆರ್.ಬಿ.ಚೌಗಲಾ, ಭಾರತಿ ಯಾಳಗಿ ಇತರರಿದ್ದರು.