ಹತ್ತರವಾಟ ಗ್ರಾಮದಲ್ಲಿ ಪಿಕೆಪಿಎಸ್ ಕಟ್ಟಡವನ್ನು ಸಂಪಾದನಾ ಸ್ವಾಮೀಜಿ ಉದ್ಘಾಟಿಸಿದರು. ರಮೇಶ ಕತ್ತಿ, ಮಾರುತಿ ಖೋತ ಇತರರಿದ್ದರು. 
ಬೆಳಗಾವಿ

ರೈತರ ಏಳಿಗೆಯಿಂದ ದೇಶ ಉದ್ಧಾರ

ಚಿಕ್ಕೋಡಿ: ಸಂಸ್ಥೆಗಿದ್ದ 7 ಲಕ್ಷ ರೂ. ಪತ್ತನ್ನು 4.5 ಕೋಟಿ ರೂಗೆ ಹೆಚ್ಚಿಸಲು ಸಹಾಯ ಮಾಡಿದ್ದೇನೆ. ರೈತರ ಏಳಿಗೆಯಿಂದ ದೇಶ ಉದ್ಧಾರವಾಗಲಿದೆ. ರಾಜಕೀಯ ಮಾಡದೇ ರೈತಾಪಿ ವರ್ಗಕ್ಕೆ ಯೋಜನೆ ತಲುಪಿಸುತ್ತಿದ್ದೇವೆ ಎಂದು ಮಾಜಿ ಸಂಸದ
ರಮೇಶ ಕತ್ತಿ ಹೇಳಿದರು.
ತಾಲೂಕಿನ ಹತ್ತರವಾಟ ಗ್ರಾಮದಲ್ಲಿ ಶನಿವಾರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಚಿಕ್ಕೋಡಿಯ ಸಂಪಾದನಾ ಮಠದ ಸಂಪಾದನಾ ಸ್ವಾಮೀಜಿ ಮಾತನಾಡಿದರು.
ಪಿಕೆಪಿಎಸ್ ಅಧ್ಯಕ್ಷ ಮಾರುತಿ ಖೋತ, ವಕೀಲ ಅಶೋಕ ಹರಗಾಪುರೆ, ರವೀಂದ್ರ ಹಿರೇಕೊಡಿ, ಬ್ಯಾಂಕ್ ನಿರೀಕ್ಷಕ ಸಂತೋಷ ಪಾಟೀಲ, ಉಪಾಧ್ಯಕ್ಷ ಮಾರುತಿ ಖೋತ, ನಿರ್ದೇಶಕರಾದ ಸದಾಶಿವ ಇಣಚಿ, ಅಪ್ಪಾಸಾಬ ಮುರಗಾಲಿ, ದಿನಕರ ಮಗದುಮ್ಮ, ರಮೇಶ ನಂದಗಾವಿ, ಮನೋಹರ ಮಾದಿಗ, ರಾಜೇಂದ್ರ ಗುಂಡಕಲ್ಲೆ, ಸಾಹೇಬದಾದಾ ಪಾಟೀಲ, ಅನುಸೂಯಾ ಮುಗಳಿ, ಸೇವಂತಿ ಮಗದುಮ್ಮ, ಸೂರ್ಯಕಾಂತ ಬಡಿಗೇರ, ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರೋಹಿತ ಘರಬುಡೆ ಇತರರಿದ್ದರು.