ಗೋಕಾಕದಲ್ಲಿ ವಿಶಾಲ ಹಿಂದೂ ಸಮಾವೇಶ ನಿಮಿತ್ತ ಶೋಭಾಯಾತ್ರೆ ಜರುಗಿತು. 
ಬೆಳಗಾವಿ

ಹಿಂದೂಗಳು ಒಗ್ಗಟ್ಟಾದರೆ ದೇಶ ಬಲಿಷ್ಠ

ನಗರದ ಚನ್ನಬಸವೇಶ್ವರ ವಿದ್ಯಾ ಪೀಠದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶಾಲ ಹಿಂದೂ ಸಮಾವೇಶದಲ್ಲಿ ಮಾತನಾಡಿ, ಹಿಂದೂ ಧರ್ಮ ವೈಜ್ಞಾನಿಕ ತಳಹದಿ ಮೇಲೆ ರೂಪಿತಗೊಂಡಿದೆ. ಜಗತ್ತಿಗೆ ವಿಶ್ವವಿದ್ಯಾಲಯ, ಆಯುರ್ವೇದ, ಜ್ಯೋತಿಷ, ಗಣಿತಶಾಸ, ಯೋಗ, ಸಂತರನ್ನು ನೀಡಿದೆ. ಹಿಂದೂಗಳು ಒಗ್ಗಟ್ಟಾಗಿದ್ದರಿಂದಲೇ ರಾಮಮಂದಿರ ನಿರ್ಮಾಣವಾಗಿದೆ. ದೇಶ, ಜಗತ್ತಿನಲ್ಲೇ 4ನೇ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ಹಿಂದೂಗಳು ಸಂಘಟಿತರಾಗಿ ದೇಶವನ್ನು ಇನ್ನಷ್ಟು ಬಲಿಷ್ಠಗೊಳಿಸೋಣ ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಳಗಾವಿ ಪ್ರಾಂತ ಕಾರ್ಯವಾಹಕ ರಾಘವೇಂದ್ರ ಕಾಗವಾಡ, ರಾಷ್ಟ್ರಸೇವಿಕಾ ಸಮಿತಿ ಜಿಲ್ಲಾ ಕಾರ್ಯವಾಹಿಕಾ ಅನುಪಾ ಕೌಶಿಕ ಮಾತನಾಡಿದರು. ಶೂನ್ಯ ಸಂಪಾದನಾ ಮಠದ ಮುರುಘರಾಜೇಂದ್ರ ಸ್ವಾಮೀಜಿ, ಶಾರದಾ ಶಕ್ತಿ ಪೀಠದ ಮಾತಾ ಶಿವಮಯಿ ಅಮ್ಮ ಸಾನ್ನಿಧ್ಯ ವಹಿಸಿದ್ದರು.
ಗೋಕಾಕ ಹಿಂದೂ ಸಮಾವೇಶ ಸಂಚಾಲನಾ ಸಮಿತಿ ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಈಟಿ, ಜಯಾನಂದ ಮುನವಳ್ಳಿ, ವಿಠ್ಠಲ ತುರಾಯಿದಾರ, ವಿನಾಯಕ ಚಿಪ್ಪಲಕಟ್ಟಿ, ಸಂಗೀತಾ ಬನ್ನೂರ, ಅರುಣ ಸಾಲಹಳ್ಳಿ, ಗಿರೀಶ ರಾಠೋಡ, ನವೀನ ಜರತಾರಕರ, ಸಚಿನ ಜಾಧವ, ಸತೀಶ ನಾಡಗೌಡ, ಮಹಾಂತೇಶ ತಾಂವಶಿ, ಅಶೋಕ ಮೇಸಿ, ದೀಪಕ ಮೆಳವಂಕಿ, ಜ್ಞಾನಾ ಪಾಟೀಲ, ರಾಜರಾಜೇಶ್ವರಿ ಸಣ್ಣಕ್ಕಿ ಇತರರಿದ್ದರು.