ಬೈಲೂರು ಗ್ರಾಮದ ನಿಷ್ಕಲ ಮಂಟಪದ ಹರ್ಡೇಕರ ಮಂಜಪ್ಪ ಸಭಾಭವನದಲ್ಲಿ ಎನ್‌ಎಸ್‌ಎಸ್ ವಿಶೇಷ ಶಿಬಿರದಲ್ಲಿ ಮಂಜುನಾಥ ಕಳಸಣ್ಣವರ, ಶಿವಾನಂದ ಹನುಮಸಾಗರ, ಸಂಗಮೇಶ ಹಿರೇಮಠ, ವಿವೇಕ ಕುರಗುಂದ, ಎಸ್.ವಿ. ಹೊನ್ನರಾಜು, ರವಿ ಅಗ್ನಿಹೋತ್ರಿ ಇತರರಿದ್ದರು.
ಸಮೀಪದ ಬೈಲೂರು ಗ್ರಾಮದ ನಿಷ್ಕಲ ಮಂಟಪದ ಹರ್ಡೇಕರ ಮಂಜಪ್ಪ ಸಭಾಭವನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಚನ್ನಮ್ಮನ ಕಿತ್ತೂರಿನ ಕೆಎನ್‌ವಿವಿ ಸಂಘದ ಪದವಿ ಮಹಾವಿದ್ಯಾಲಯದ ಎನ್‌ಎಸ್‌ಎಸ್ ವಿಶೇಷ ಶಿಬಿರದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿ ಅಧ್ಯಾತ್ಮದ ಅರಿವು ಪಡೆಯುವಲ್ಲಿ ವಚನ ಸಾಹಿತ್ಯ ಮಹತ್ತರ ಪಾತ್ರವಹಿಸಿದೆ ಎಂದರು.
ಸಮಾಜ ಸೇವಕ ಶಿವಾನಂದ ಹನುಮಸಾಗರ ಮಾತನಾಡಿ, ಯುವಜನತೆಯಲ್ಲಿ ಸೇವಾ ಮನೋಭಾವ ಬೆಳೆಸುವಲ್ಲಿ ಎನ್‌ಎಸ್‌ಎಸ್ ಶಿಬಿರ ಸಹಕಾರಿಯಾಗಿದೆ ಎಂದರು. ಗ್ರಾಪಂ ಸದಸ್ಯ ಸಂಗಮೇಶ ಹಿರೇಮಠ ಮಾತನಾಡಿದರು. ಶಿಕ್ಷಕ ವಿವೇಕ ಕುರಗುಂದ, ಶಿಬಿರಾಧಿಕಾರಿ ಎಸ್.ವಿ. ಹೊನ್ನರಾಜು, ರವಿ ಅಗ್ನಿಹೋತ್ರಿ, ಗಂಗಾಧರ ಹನುಮಸಾಗರ, ಆನಂದ ಕರೆಪ್ಪನವರ, ವಿನಾಯಕ ಹುಬ್ಬಳ್ಳಿ, ಪ್ರಕಾಶ ಶಿವನವ್ವನವರ, ನಾಗೇಶ ಬೆಣ್ಣಿ, ವಿಜಯ ನೇಗಿನಹಾಳ ಇತರರಿದ್ದರು.