ಕಕ್ಕೇರಿಯಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಮಹಾಮೇಳ ಅರಿಶಿಣ-ಕುಂಕುಮ ಸಮಾರಂಭ ಉದ್ಘಾಟನೆಯಲ್ಲಿ ಶಾಸಕ ವಿಠ್ಠಲ ಹಲಗೇಕರ, ಭಾರತಿ ರಾಮಾನಂದ ಸ್ವಾಮೀಜಿ, ಮೋಹನ ಮಹಾರಾಜರು ಇತರರಿದ್ದರು.
ಕಕ್ಕೇರಿ:
ಗ್ರಾಮದ ವಿಶ್ವಕರ್ಮ ಮಂದಿರದ ಆವರಣದಲ್ಲಿ ವಿಶ್ವಕರ್ಮ ಸಮಾಜ ವಿಕಾಸ ಸಂಘದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಎರಡನೇ ವರ್ಷದ ವಿಶ್ವಕರ್ಮ ಮಹಾಮೇಳ ಅರಿಶಿಣ-ಕುಂಕುಮ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸ್ಥಳೀಯ ಸಿದ್ಧಾರೂಢ ಮಠದ ಭಾರತಿ ರಾಮಾನಂದ ಸ್ವಾಮೀಜಿ ಮಾತನಾಡಿ, ವಿಶ್ವಕರ್ಮ ಸಮುದಾಯದವರು ರೈತರಿಗೆ ಕೃಷಿ ಚಟುವಟಿಕೆ ಸಾಮಗ್ರಿ, ಪೀಠೋಪಕರಣ ಸೇರಿದಂತೆ ಅನೇಕ ಕೌಶಲ ಕೆಲಸ ಮಾಡುತ್ತಿದ್ದಾರೆ. ಒಟ್ಟಾರೆ ವಿಶ್ವಕರ್ಮರ ಸಾಮಾಜಿಕ ಸೇವೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸುನೇನಟ್ಟಿಯ ಬಾಲ ಮುಕುಂದ ಮಠದ ಮೋಹನ ಮಹಾರಾಜರು, ಭಾಗ್ಯಲಕ್ಷ್ಮೀ ಸಕ್ಕರೆ ಕಾರ್ಖಾನೆ ಮಾಜಿ ಅಧ್ಯಕ್ಷ ರಿಯಾಜ್ ಅಹ್ಮದ್ ಪಟೇಲ್ ಮಾತನಾಡಿದರು.
ಸ್ಥಳೀಯ ವಿಶ್ವಕರ್ಮ ಸಮುದಾಯದ ಅಧ್ಯಕ್ಷ ಬಿಷ್ಟಪ್ಪ ಬಡಿಗೇರ, ಪಿಕೆಪಿಎಸ್ ಉಪಾಧ್ಯಕ್ಷ ಡಾ.ಪ್ರಸನ್ನ ದೊಡ್ಡೆಬೈಲಕರ, ಪ್ರಮೋದ ಕೊಚೇರಿ, ಮಲ್ಲಪ್ಪ ತಾರಿಹಾಳ, ಬರಮಾಣಿ ಪಾಟೀಲ, ಪಂಡಿತ ಓಗಲೆ, ರಾಜು ರಪಾಟೆ, ಮನೋಹರ ಕದಂ, ಶಿವಾನಂದ ಗೋದಳ್ಳಿ, ಧರ್ಮ ಪಾಟೀಲ, ದತ್ತ ಪಾಟೀಲ, ನಾರಾಯಣ ಕಮ್ಮಾರ, ಗಣಪತಿ ಕಮ್ಮಾರ, ನಾಮದೇವ ಕಮ್ಮಾರ, ಜ್ಯೋತಿಬಾ ಸುತಾರ, ಈರಪ್ಪ ಕಮ್ಮಾರ ಇತರರಿದ್ದರು. ಪ್ರೊ.ನಾರಾಯಣ ಚನ್ನಾಪುರ ನಿರೂಪಿಸಿದರು.