ಅಥಣಿ ರೋಟರಿ ಸಂಸ್ಥೆ ವತಿಯಿಂದ ಆದರ್ಶ ಶಿಕ್ಷಕರಿಗೆ ಪ್ರಶಸ್ತಿ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಡಾ.ವಿ.ಎಸ್.ಮಾಳಿ, ಗಜಾನನ ಮಂಗಸೂಳಿ, ಸಚಿನ ದೇಸಾಯಿ, ಸುನೀತಾ ದೇಸಾಯಿ, ಅನಿತಾ ಬಣಜವಾಡ ಇತರರಿದ್ದರು.
- ಸಾಹಿತಿ ಡಾ.ವಿ.ಎಸ್.ಮಾಳಿ ಬಣ್ಣನೆ
- ರೋಟರಿ ಸಂಘ ಮತ್ತು ಇನ್ನರವ್ಹೀಲ್ ಸಂಘದ ಸಹಯೋಗದಲ್ಲಿ ಆಯೋಜನೆ
- ಆದರ್ಶ ಶಿಕ್ಷಕ ಪ್ರಶಸ್ತಿ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ
ಅಥಣಿ: ಜಗತ್ತನ್ನು ಪರಿವರ್ತನೆ ಮಾಡುವ ಶಕ್ತಿ ಶಿಕ್ಷಕರಲ್ಲಿದೆ. ಸಮೃದ್ಧ ಭಾರತ, ಸುಶಿಕ್ಷಿತ ಭಾರತ ನಿರ್ಮಾಣಕ್ಕೆ ಶಿಕ್ಷಕರ ಕೊಡುಗೆ ಅಪಾರವಾಗಿದೆ ಎಂದು ಹಿರಿಯ ಸಾಹಿತಿ ಡಾ.ವಿ.ಎಸ್.ಮಾಳಿ ಹೇಳಿದರು.
ಪಟ್ಟಣದ ಬಣಜವಾಡ ಶಿಕ್ಷಣ ಸಂಸ್ಥೆಯಲ್ಲಿ ರೋಟರಿ ಸಂಘ ಮತ್ತು ಇನ್ನರವ್ಹೀಲ್ ಸಂಘದ ಸಹಯೋಗದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಆದರ್ಶ ಶಿಕ್ಷಕ ಪ್ರಶಸ್ತಿ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.
ಎಲ್ಲ ಪ್ರಶಸ್ತಿಗಳಿಗಿಂತ ರೋಟರಿ ಸಂಸ್ಥೆ ನೀಡುವ ಪ್ರಶಸ್ತಿ ಮೌಲ್ಯಯುತವಾಗಿದೆ. ಇಲ್ಲಿ ಸೇವೆ, ಹಿರಿತನ, ಅರ್ಹತೆ ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತದೆ. ಹೀಗಾಗಿ ಸಮಾಜ ಸೇವೆಯಲ್ಲಿ ರೋಟರಿ ಸಂಸ್ಥೆ ಕೊಡುಗೆ ಅಪಾರ ಎಂದರು.
ರೋಟರಿ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಮಾತನಾಡಿ, ವಿದ್ಯಾರ್ಥಿಗಳ ಬದುಕು ರೂಪಿಸಿ ನಾಡಿಗೆ ಸಮರ್ಪಿಸುವ ಶಿಕ್ಷಕರ ಸೇವೆ ಸ್ಮರಣೀಯವಾಗಿದೆ ಎಂದು ಹೇಳಿದರು.
ವಿವಿಧ ಶಾಲೆಗಳ ೩೦ಕ್ಕೂ ಅಧಿಕ ಶಿಕ್ಷಕರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.
ರೋಟರಿ ಕ್ಲಬ್ ಅಧ್ಯಕ್ಷ ಸಚಿನ ದೇಸಾಯಿ, ಕಾರ್ಯದರ್ಶಿ ಶೇಖರ ಕೋಲಾರ, ಸದಸ್ಯರಾದ ಡಾ.ಪಿ.ಪಿ.ಮಿರಜ, ಅರುಣ ಯಲಗುದ್ರಿ, ಅನಿಲ ದೇಶಪಾಂಡೆ, ಅರುಣ ಸೌದಾಗರ, ಅನಿತಾ ಬಣಜವಾಡ, ಡಾ.ಆನಂದ ಗುಂಜಿಗಾವಿ, ಶ್ರೀಕಾಂತ ಅಥಣಿ, ಆನಂದ ಟೋನಪಿ, ಡಿ.ಡಿ.ಮೆಕನಮರಡಿ, ಸುನೀತಾ ದೇಸಾಯಿ, ಶೋಭಾ ಕೋಲಾರ, ಸುಮೇಧಾ ಮಿರಜ, ಮಹಾದೇವಿ ಪಾಟೀಲ, ವೈಶಾಲಿ ಮಠಪತಿ, ಸುಜಾತಾ ಜಗದಾಳಮಠ, ಎಸ್.ಕೆ.ಹೊಳೆಪ್ಪನವರ ಇತರರಿದ್ದರು.