ಹುಲಿಕೊತ್ತಲ ಗ್ರಾಮದ ನೂತನ ಸಿದ್ಧಾರೂಢ ಮಠದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶಾಸಕ ವಿಠ್ಠಲ ಹಲಗೇಕರ ಮಾತನಾಡಿದರು. ನಾನಾಸಾಹೇಬ ಪಾಟೀಲ, ಷಡಕ್ಷರಿ ಸ್ವಾಮೀಜಿ ಇತರರಿದ್ದರು. 
ಬೆಳಗಾವಿ

ಸಮಾಜಕ್ಕೆ ಮಠಗಳ ಕೊಡುಗೆ ಅಪಾರ

ಇಟಗಿ: ಭರತ ಭೂಮಿಯು ಅನೇಕ ಮಹಾತ್ಮ, ಋಷಿ ಮುನಿಗಳ ಪುಣ್ಯಸ್ಥಳವಾಗಿದ್ದು, ಆಧ್ಯಾತ್ಮಿಕ ಪರಂಪರೆ ಮತ್ತು ಸಂಸ್ಕೃತಿ ವಿಶ್ವಕ್ಕೇ ಮಾದರಿಯಾಗಿದೆ ಎಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.
ಸಮೀಪದ ಹುಲಿಕೊತ್ತಲ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಿದ್ಧಾರೂಢ ಮಠದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಯುವ ಪೀಳಿಗೆಗೆ ಧರ್ಮ ಸಂಸ್ಕಾರ ನೀಡುವಲ್ಲಿ ನೂತನ ಮಠವು ಪ್ರಮುಖ ಪಾತ್ರವಹಿಸಲಿದೆ ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನಾನಾಸಾಹೇಬ ಪಾಟೀಲ ಮಾತನಾಡಿದರು. ಹುಬ್ಬಳ್ಳಿ ರಾಜವಿದ್ಯಾಶ್ರಮದ ಷಡಕ್ಷರಿ ಸ್ವಾಮೀಜಿ, ಚಿಕ್ಕಮುನವಳ್ಳಿ ಆರೂಢ ಮಠದ ಶಿವಪುತ್ರಸ್ವಾಮೀಜಿ, ಬಿಳಕಿ ಅವರೊಳ್ಳಿ ರುದ್ರಸ್ವಾಮಿ ಮಠದ ಚನ್ನಬಸವದೇವರು, ಪಂಚನಾಯಕನಹಟ್ಟಿಯ ಕೇಶವಾನಂದಪುರಿ ಸ್ವಾಮೀಜಿ, ರಾಣಿ ಶುಗರ್ಸ್ ಮಾಜಿ ಉಪಾಧ್ಯಕ್ಷ ವೀರೇಶ ಕಂಬಳಿ, ಬಿಜೆಪಿ ಯುವ ಮುಖಂಡರಾದ ಸುನೀಲ ಮಡ್ಡಿಮನಿ, ಶ್ರೀಕಾಂತ ಇಟಗಿ, ನಿಜಲಿಂಗಯ್ಯ ಹಿರೇಮಠ, ಬಸಪ್ಪ ಬಸೆಟ್ಟಿ, ಮುರಗಯ್ಯ ಪೂಜೇರ, ನಾಗನಗೌಡ ಬೈಲೂರ, ಗಂಗಾಧರ ಸರದಾರ, ಅದೃಶ್ಯ ಮೂಲಿಮನಿ, ಅಪ್ಪಣ್ಣ ವಾರದ ಇತರರಿದ್ದರು.