ವಡಗಾವಿಯಲ್ಲಿ ಹಮ್ಮಿಕೊಂಡಿದ್ದ ವೀರಶೈವ ಡೋಹರ ಕಕ್ಕಯ್ಯ ಸಮುದಾಯದ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಸಿಪಿಐ ಎಸ್.ಸಿ.ಮಾನಿ, ಡಾ.ಮಂಜುನಾಥ ಪೋಳ, ಡಾ.ಸುಜಾತಾ ಫೋಳ ಇತರರು ಇದ್ದರು.
ಬೆಳಗಾವಿ: ವೀರಶೈವ ಡೋಹರ ಸಮುದಾಯದ ಕೊಡುಗೆ ಅಪಾರ, ಸಮುದಾಯದ ಸಾಕಷ್ಟು ಜನರು ಉನ್ನತ ಹುದ್ದೆಗೆ ಏರಿದ್ದಾರೆ. ಪ್ರತಿ ಕ್ಷೇತ್ರದಲ್ಲೂ ಇನ್ನಷ್ಟು ಯುವಕರು ಸಾಧನೆ ಮಾಡುವಂತಾಗಲಿ ಎಂದು ಶಹಾಪುರ ಪೊಲೀಸ್ ಠಾಣೆ ಸಿಪಿಐ ಎಸ್.ಸಿ.ಮಾನಿ ಹಾರೈಸಿದರು.
ವಡಗಾವಿಯ ಡೋರಗಲ್ಲಿಯ ದುರ್ಗಾದೇವಿ ದೇವಸ್ಥಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವೀರಶೈವ ಡೋಹರ ಕಕ್ಕಯ್ಯ ಸಮುದಾಯದ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅತಿಥಿಯಾಗಿ ಪಾಲ್ಗೊಂಡ ದೆಹಲಿಯ ಏಮ್ಸ್ ಆಸ್ಪತ್ರೆಯ ಡಯಾಬಿಟಿಸ್‌ಹಾಗೂ ಕಿಡ್ನಿ ಶಸ್ತ್ರವೈದ್ಯ ಡಾ.ಮಂಜುನಾಥ ಮಾರುತಿ ಪೋಳ ಮಾತನಾಡಿ, ಡಾಯಾಬಿಟಿಸ್‌ಮತ್ತು ಕಿಡ್ನಿ ಸಮಸ್ಯೆಯನ್ನು ಶಸ್ತ್ರ ಚಿಕಿತ್ಸೆ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಎಂದರು.
ಉಪನ್ಯಾಸಕಿ ಡಾ.ಸುಜಾತಾ ಫೋಳ ಮಾತನಾಡಿ, ಹೆಣ್ಮಕ್ಕಳು ಉನ್ನತ ಮಟ್ಟಕ್ಕೆ ಬೆಳೆಯಲು ಸಾಕಷ್ಟು ತೊಂದರೆ ಬರುತ್ತವೆ. ಅವೆಲ್ಲವನ್ನು ಮೆಟ್ಟಿ ನಿಂತರೇ ನಾವು ಗೆಲ್ಲೋದಕ್ಕೆ ಸಾಧ್ಯಎಂದರು. ಪಿಎಚ್.ಡಿ ಪಡೆದ ಡಾ.ರವಿಶಂಕರ ಲಕ್ಷ್ಮಣ ಹುಟುಗಿ, ಬಿಎಚ್‌ಎಂಎಸ್‌ನಲ್ಲಿ ಎಂಡಿ ಪಡೆದ ಡಾ.ಪೂಜಾ ಸುರೇಶ ಹುಟುಗಿ, ಸಿಎಸ್ ಆದ ಶ್ವೇತಾ ಲಕ್ಷ್ಮಣ ಹುಟುಗಿ, ಎಂಡಿ ಪಡೆದ ಡಾ.ಅಶ್ವಿನಿ ಸುರೇಶ ಕದಂ ಅವರಿಗೆ ಸನ್ಮಾನಿಸಲಾಯಿತು.
ಡೋಹರ ಕಕ್ಕಯ್ಯ ಸಮುದಾಯದ ಅಧ್ಯಕ್ಷ ವಿಠ್ಠಲ ಫೋಳ, ಮಹಿಳಾಧ್ಯಕ್ಷೆ ಅಶ್ವಿನಿ ಶ್ರೇಯಕರ, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ರಾವಬಹದ್ಧೂರ ಕದಂ, ನಿಜಲಿಂಗ ನಾರಾಯಣಕರ, ಯುವ ಸಂಘಟನೆ ಕಾರ್ಯಕರ್ತ ವಿನಾಯಕ ಕದಂ, ಯೋಗೇಶ ಮಾವರಕರ, ಸ್ನೇಹಾ ಕದಂ ಇತರರು ಇದ್ದರು.